ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಮುಗಿದಿದ್ದು, ಎನ್ಡಿಎ ಮೈತ್ರಿಕೂಟದ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಖಾತೆ ಹಂಚಿಕೆ ಕೂಡ ಆಗಿದೆ.
ಇದೀಗ ಲೋಕಸಭೆ ಸ್ಪೀಕರ್ ಆಯ್ಕೆಗೆ ಕಸರತ್ತು ನಡೆದಿದೆ. ಇದರ ಮಧ್ಯೆಯೇ, ಟಿಡಿಪಿ ಅಭ್ಯರ್ಥಿಯೇ ಲೋಕಸಭೆ ಸ್ಪೀಕರ್ ಆಗುವುದಾದರೆ, I.N.D.I.A ಒಕ್ಕೂಟದ ಬೆಂಬಲವು ಟಿಡಿಪಿಗೆ ಇರಲಿದೆ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.
ಟಿಡಿಪಿಯ ಅಭ್ಯರ್ಥಿಯನ್ನೇ ಲೋಕಸಭೆ ಸ್ಪೀಕರ್ ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂಬ ಮಾತುಗಳನ್ನು ನಾನು ಕೇಳಿದೆ. ಹಾಗೊಂದು ವೇಳೆ, ಟಿಡಿಪಿಯ ಅಭ್ಯರ್ಥಿಯೇ ಲೋಕಸಭೆ ಸ್ಪೀಕರ್ ಆಗುವುದಾದರೆ, I.N.D.I.A ಒಕ್ಕೂಟದ ಪಕ್ಷಗಳು ಚರ್ಚಿಸುತ್ತವೆ. ಆ ಮೂಲಕ ಟಿಡಿಪಿ ಅಭ್ಯರ್ಥಿಗೇ ಬೆಂಬಲ ಸೂಚಿಸುವ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಹಾಗೊಂದು ವೇಳೆ, ಬಿಜೆಪಿಯವರೇ ಕಣಕ್ಕಿಳಿರೆ, ಎನ್ಡಿಎ ಮೈತ್ರಿಕೂಟವೇ ಛಿದ್ರವಾಗಲಿದೆ ಎಂದು ಸಂಜಯ್ ರಾವತ್ ಎಚ್ಚರಿಸಿದರು.
ಸಂಜಯ್ ರಾವತ್ ಹೇಳಿಕೆಯ ಬೆನ್ನಲ್ಲೇ ಜೆಡಿಯು ಪ್ರತಿಕ್ರಿಯಿಸಿದ್ದು, ಲೋಕಸಭೆ ಸ್ಪೀಕರ್ ಆಯ್ಕೆ ವಿಚಾರದಲ್ಲಿ ಬಿಜೆಪಿ ತೀರ್ಮಾನವೇ ಅಂತಿಮ ಎಂಬುದಾಗಿ ತಿಳಿಸಿದೆ.