ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಲಕನ ನಿಯಂತ್ರಣ ತಪ್ಪಿ ಕಾರು ಪ್ರಪಾತಕ್ಕೆ ಉರುಳಿದ ಬಿದ್ದಿದ್ದು, ಅದೃಷ್ಟವಶಾತ್ ಕಾರಿನಲ್ಲಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ .
ನಾಪೋಕ್ಲು ಸಮೀಪದ ಬೆಟ್ಟಗೇರಿಯ ತಲೂರು ಜಂಕ್ಷನ್ ಬಳಿ ಭಾನುವಾರ ಘಟನೆ ನಡೆದಿದೆ.
ಭಾಗಮಂಡಲ ಕಡೆಯಿಂದ ಮಡಿಕೇರಿಗೆ ಟಿ ನರಸೀಪುರದ ನಿವಾಸಿ ನಾಗೇಂದ್ರ ಚಲಾಯಿಸುತಿದ್ದ ಕಾರು ತೀವ್ರ ರಸ್ತೆಯಿಂದಾಗಿ ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ.
ಕಾರಲ್ಲಿ ನಾಗೇಂದ್ರ ಅವರ ಪತ್ನಿ ಮತ್ತು ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಜೀವಪಾಯದಿಂದ ಪಾರಾಗಿದ್ದಾರೆ.