ಮೇಘನಾ ಶೆಟ್ಟಿ, ಶಿವಮೊಗ್ಗ
ಮಕ್ಕಳ ಬೆಳವಣಿಗೆಗೆ ಬೇಕಾಗಿರೋದು ಚಿಪ್ಸ್, ಬನ್ಸ್, ಕೇಕ್, ಬರ್ಗರ್ಸ್ ಹಾಗೂ ಪಿಝಾ. ಅದಿಲ್ಲದೇ ಹೋದ್ರೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಅಷ್ಟೇ ಅಲ್ಲ ಅವುಗಳನ್ನು ತಿನ್ನದೇ ಮಕ್ಕಳ ಮಾನಸಿಕ ಆರೋಗ್ಯ ಹಾಳಾಗುತ್ತದೆ. ಅವರು ದುಃಖಿತರಾಗುತ್ತಾರೆ. ಬೇಜಾರಾಗುತ್ತಾರೆ..
ಅವರನ್ನು ಖುಷಿಯಾಗಿಡೋದಕ್ಕೆ ಬಲಗೈಗೆ ಮೊಬೈಲ್ ಹಾಗೂ ಎಡಗೈಗೆ ಚಿಪ್ಸ್ ಪ್ಯಾಕ್ ಕೊಡಬೇಕು!!
ಅಲ್ವಾ?
ಈ ಮನಸ್ಥಿತಿ ಬದಲಾಗೋದು ಯಾವಾಗ? ಒಂದು ಬಾರಿ ತಿಂದ್ರೆ ಏನಾಗಿಬಿಡುತ್ತದೆ? ನಾವೆಲ್ಲ ತಿಂದಿಲ್ವಾ? ಹೀಗೆ ಏನೇನೋ ಪ್ರಶ್ನೆಗಳು.. ನೀವು ಮೊದಲ ಬಾರಿಗೆ ಪಾನಿಪುರಿ, ಗೋಬಿ ತಿಂದಿದ್ದು ಯಾವಾಗ? ನೀವು ಐದನೇ ಕ್ಲಾಸ್ ಇದ್ದಾಗ? ಅಥವಾ ಕಾಲೇಜಿಗೆ ಬಂದಾಗ? ಪಿಝಾ ತಿಂದಿದ್ದು ಯಾವಾಗ? ಕೆಲಸಕ್ಕೆ ಸೇರಿದಾಗ? ಅಥವಾ ಈಗ ಮಕ್ಕಳು ತಿನ್ನೋಕೆ ಶುರು ಮಾಡಿದಮೇಲೆ..
ಆದರೆ ನಿಮ್ಮ ಮಕ್ಕಳಿಗೇಕೆ ಈಗಿನಿಂದಲೇ ಜಂಕ್ ಫುಡ್ ರೂಢಿ ಮಾಡ್ತೀರಿ? ಹಣ್ಣು, ತರಕಾರಿ, ಡ್ರೈ ಫ್ರೂಟ್ಸ್ ತಿನ್ನಬಹುದಲ್ವಾ? ಮಕ್ಕಳಿಗೂ ಅದನ್ನೇ ಕೊಡಬಹುದಲ್ವಾ? ಯಾರು ಯಾವಾಗ ಸಾಯ್ತಾರೆ ಗೊತ್ತಿಲ್ಲ, ಇಷ್ಟ ಇರೋದನ್ನು ತಿಂದು ಸಾಯಬೇಕು ಅನ್ನೋ ಭಂಡ ವಾದ ಮಾಡ್ತೀರಾ? ಹಾಗಿದ್ರೆ ಹೇಳಿ ನಾಳೆ ಇರ್ತೀವೋ ಇಲ್ಲವೋ ಗೊತ್ತಿಲ್ಲ ಮತ್ಯಾಕೆ ಜೀವನವನ್ನು ಪ್ಲಾನ್ ಮಾಡ್ತೀರಾ? ನಾಳೆಗಾಗಿ ಯಾಕೆ ಸೇವಿಂಗ್ಸ್ ಮಾಡ್ತೀರ? ಯಾಕೆ ಕೆಲಸ ಮಾಡ್ತೀರಾ?
ಮಕ್ಕಳು ಅತಿಯಾಗಿ ಜಂಕ್ ತಿನ್ನುತ್ತಿದ್ದಾರೆ ಅಂತ ನಿಮಗೆ ಗೊತ್ತಾಗೋದಿಲ್ಲ ಅನ್ನೋದಾದ್ರೆ ಅವರಲ್ಲಿ ಈ ಬಿಹೇವಿಯರ್ಸ್ ಇದೆಯಾ ನೋಡಿ.. ಇದೆ ಎನ್ನೋದಾದ್ರೆ ಅವರು ಅತಿಯಾಗಿ ತಿಂತಿದ್ದಾರೆ ಎಂದರ್ಥ..
ಪುಟ್ಟ ಕಂದಮ್ಮಗಳಾದ್ರೂ ಮೂಡ್ ಚೇಂಜಸ್ ಆಗತ್ತೆ. ಬೇಗ ಖುಷಿ ಆಗ್ತಾರೆ, ಇನ್ಯಾವುದಕ್ಕೋ ಕೋಪ ಬರತ್ತೆ. ಕೆಲವೊಮ್ಮೆ ಇರಿಟೇಟ್ ಆಗಿಯೇ ಇರ್ತಾರೆ.
ಬೇರೆ ಮಕ್ಕಳಂತೆ ಆಟಪಾಠದಲ್ಲಿ ತೊಡಗದೇ ಸುಮ್ಮನೆ ಕೂರುವುದು, ಡಿಪ್ರೆಷನ್ , ಆಂಕ್ಸೈಟಿ, ಒತ್ತಡ ಇರುತ್ತದೆ.
ಎಲ್ಲದಕ್ಕೂ ಕೋಪ, ಹೇಳಿದ್ದಕ್ಕೆಲ್ಲ ಉಲ್ಟಾ ಮಾತನಾಡುವ ಟೆಂಡೆನ್ಸಿ, ಜಗಳ ಮಾಡುವುದು. ಹೊಡೆಯುವುದು
ಯಾವ ವಿಷಯಕ್ಕೂ ಎಕ್ಸೈಟ್ ಆಗದೇ ಇರುವುದು, ಒಟ್ಟಾರೆ ಕೆಟ್ಟ ಆಟಿಟ್ಯೂಡ್ ಬೆಳೆಸಿಕೊಳ್ಳುವುದು.
ದಢೂತಿ ದೇಹ, ಬೊಜ್ಜು ಸಾಧ್ಯತೆ ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳು, ಹಲ್ಲಿನ ಸಮಸ್ಯೆ ಕೂಡ ಬಾಧಿಸಬಹುದು.