Sunday, December 3, 2023

Latest Posts

SHOCKING | ಈ ಬೇಡಿಕೆ ಈಡೇರಿಸದಿದ್ರೆ ನಿಮ್ಮನ್ನು ಕೊಂದು, ಮೋದಿ ಸ್ಟೇಡಿಯಂ ಉಡಾಯಿಸ್ತೇವೆ: ಪ್ರಧಾನಿಗೆ ಜೀವ ಬೆದರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬೇಡಿಕೆಯನ್ನು ಈಡೇರಿಸದಿದ್ರೆ ನಿಮ್ಮನ್ನು ಹತ್ಯೆ ಮಾಡ್ತೀವಿ, ನರೇಂದ್ರ ಮೋದಿ ಸ್ಟೇಡಿಯಂನ್ನು ಬ್ಲಾಸ್ಟ್ ಮಾಡ್ತೀವಿ..

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಇ-ಮೇಲ್ ಬಂದಿದ್ದು, ಈಗಾಗಲೇ ದಾಳಿ ನಡೆಸಲು ಜನರನ್ನು ನಿಯೋಜಿಸಲಾಗಿದೆ ಎನ್ನುವ ಮಾಹಿತಿಯನ್ನು ಮೇಲ್‌ನಲ್ಲಿ ನೀಡಲಾಗಿದೆ.

ಬೇಡಿಕೆ ಏನು?
ಭಾರತ ಸರ್ಕಾರ 500 ಕೋಟಿ ರೂಪಾಯಿ ಕೊಡಬೇಕು, ಜೊತೆಗೆ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ನೋಯ್‌ಯನ್ನು ರಿಲೀಸ್ ಮಾಡಬೇಕು. ಭಾರತದಲ್ಲಿ ಎಲ್ಲವೂ ಮಾರಾಟವಾಗುತ್ತದೆ, ನಾವು ಏನೇನೋ ಖರೀದಿ ಮಾಡಿದ್ದೇವೆ, ನೀವೆಷ್ಟೇ ಸುರಕ್ಷಿತವಾಗಿದ್ದರೂ ನಮ್ಮಿಂದ ತಪ್ಪಿಸಿಕೊಳ್ಳೋಕೆ ಸಾಧ್ಯವಿಲ್ಲ. ಮಾತನಾಡೋ ಇಷ್ಟ ಇದ್ದರೆ ಮೇಲ್‌ಗೆ ರಿಪ್ಲೇ ಮಾಡಿ ಎಂದು ಎನ್‌ಐಎಗೆ ಕಳುಹಿಸಿದ ಮೇಲ್‌ನಲ್ಲಿ ಹೇಳಲಾಗಿದೆ. ಈ ಬೇಡಿಕೆಗಳಿಗೆ ಇಲ್ಲ ಎಂದರೆ ಪ್ರಧಾನಿ ಮೋದಿಯನು ಹತ್ಯೆ ಮಾಡಿ ಸ್ಟೇಡಿಯಂ ಉಡಾಯಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಲಾರೆನ್ಸ್ ಬಿಷ್ನೋಯ್ ಸದ್ಯ ಮಂಡೋಲಿ ಜೈಲಿನಲ್ಲಿದ್ದಾರೆ. ಪೊಲೀಸರ ಅನ್ವಯ ಈ ಮೇಲ್ ಬಂದಿದ್ದು ಭಾರತದಿಂದಲ್ಲ, ಯುರೋಪ್‌ನಿಂದ. ಫೆಡರಲ್ ಏಜೆನ್ಸಿ ಮುಂಬೈ ಪೊಲೀಸರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದೆ.

ವಿದೇಶದಲ್ಲಿ ಕುಳಿತು ಯಾರೋ ಕಿಡಿಗೇಡಿತನ ಮಾಡಿದಂತಿದೆ, ಆದರೂ ಮೇಲ್ ಕಳುಹಿಸಿದವರಿಗಾಗಿ ಶೋಧ ನಡೆಯುತ್ತಿದೆ. ಕ್ರಿಕೆಟ್ ಪಂದ್ಯಗಳು ಇರುವುದರಿಂದ ಭದ್ರತಾ ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!