ಎಷ್ಟೋ ಜನರಿಗೆ ಬದಲಾವಣೆ ಆಗಬೇಕು ಅನ್ನೋ ವಿಚಾರ ಗೊತ್ತಿರುತ್ತದೆ. ಆದರೆ ಹೇಗೆ ಅನ್ನೋದು ಗೊತ್ತಾಗೋದಿಲ್ಲ. ನಾಳೆಯಿಂದ ನಾಳೆಯಿಂದ ಅನ್ನೋ ಬದಲು, ಈಗಿನಿಂದ ನಾನು ಬದಲಾಗ್ತೀನಿ ಎನ್ನುವ ಮೈಂಡ್‌ಸೆಟ್ ನಿಮ್ಮದಾಗಿರಲಿ. ಚೇಂಜ್ ಆಗುವ ಮೊದಲ ಸ್ಟೆಪ್ಸ್ ಇಲ್ಲಿದೆ..
ಗೋಲ್ಸ್ ಏನು? ಯಾವುದಕ್ಕಾಗಿ ನೀವು ಬದಲಾಗಬೇಕು? ಮುಂದೆ ಗುರಿ ಇದ್ದರೆ ಕೆಲಸ ಮಾಡೋದು ಸುಲಭ ಅಲ್ವಾ? ಅದನ್ನು ಸೆಟ್ ಮಾಡಿಕೊಳ್ಳಿ
ನಿಮ್ಮ ಆರೋಗ್ಯ, ನಿಮ್ಮ ದೇಹದ ಬಗ್ಗೆ ಗಮನ ಇರಲಿ. ಉತ್ತಮ ಆರೋಗ್ಯ, ದಿನವೂ ವ್ಯಾಯಮ, ಎಂಟು ಗಂಟೆ ನಿದ್ದೆ ಮಾಡಲೇಬೇಕು.
ಜೀವನದಲ್ಲಿ ನಿಮ್ಮ ಬಳಿ ಏನೆಲ್ಲಾ ಇಲ್ಲ ಅನ್ನೋದಕ್ಕಿಂತ ಏನೆಲ್ಲಾ ಇದೆ ಅನ್ನೋದನ್ನು ಕೌಂಟ್ ಮಾಡಿ. ನಿಮ್ಮ ಬಳಿ ಪೇರೆಂಟ್ಸ್, ಸ್ನೇಹಿತರು, ಇರುವ ಜಾಬ್, ಪ್ರೀತಿ, ಇದೆಲ್ಲಾ ಬೇರೆಯವರ ಬಳಿ ಇರದೇ ಇರಬಹುದು. ಗ್ರಾಂಟೆಡ್ ಆಗಿ ತೆಗೆದುಕೊಳ್ಳಬೇಡಿ.
ಯಾವ ಕಾರಣವೂ ಇಲ್ಲದೆ, ಏನನ್ನೂ ನಿರೀಕ್ಷೆ ಮಾಡದೆ ಕರುಣೆ ತೋರಿ. ಜೀವನದ ಮೇಲೆ ಕರುಣೆ ಇರಲಿ. ಸುತ್ತಮುತ್ತ ಇರುವ ಎಲ್ಲ ಜೀವಿಗಳ ಮೇಲೂ ದಯೆ ಇರಲಿ. ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಮೇಲೆ ಕರುಣೆ ತೋರಿಸಿಕೊಳ್ಳಿ. ಜೀವನ ಪ್ಲ್ಯಾನ್ ಮಾಡಿದ ಹಾಗೆ ನಡೆಯೋದಿಲ್ಲ.
ನಿಮ್ಮನ್ನು ಮಾತ್ರ ನೋಡಿಕೊಳ್ಳಿ, ಪಕ್ಕದವರನ್ನು ನೋಡಿ ಹೊಟ್ಟೆ ಉರಿದುಕೊಳ್ಳಬೇಡಿ. ಇದು ಯಾವುದಕ್ಕೂ ಉಪಯೋಗ ಆಗೋದಿಲ್ಲ.
ನಿಮ್ಮ ಕಂಫರ್ಟ್ ಝೋನ್‌ನಿಂದ ಹೊರಗೆ ಬರೋದಕ್ಕೆ ಟ್ರೈ ಮಾಡಿ. ಕಷ್ಟಪಡಬೇಕು ಎಂದು ಹೇಳೋದಿಲ್ಲ. ಒಂದೊಂದೆ ಹೆಜ್ಜೆ ನಿಧಾನಕ್ಕೆ ಇಡಿ.