ಈ ಶಾಪಿಂಗ್ ಆಪ್ ನಿಮ್ಮ ಫೋನ್‌ನಲ್ಲಿದ್ರೆ ತಕ್ಷಣ ಡಿಲೀಟ್ ಮಾಡಿ, ಗೂಗಲ್‌ನಿಂದ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನಕಲಿ ಆಪ್‌ಗಳ ಹಾವಳಿ ಹೆಚ್ಚಾಗಿದ್ದು, ಚೀನಾದ ಈ ಆಪ್‌ನ್ನು ಇನ್ಸ್ಟಾಲ್ ಮಾಡಿದ್ದರೆ ತಕ್ಷಣ ಅನ್‌ಇನ್ಸ್ಟಾಲ್ ಮಾಡಿ ಎಂದು ಗೂಗಲ್ ಪ್ಲೇಸ್ಟೋರ್ ಎಚ್ಚರಿಕೆ ನೀಡಿದೆ.

ಕೆಲವೇ ದಿನಗಳ ಹಿಂದೆ 12 ಅಪ್ಲಿಕೇಷನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್ ತೆಗೆದು ಹಾಕಿತ್ತು, ಇದೀಗ ಚೀನಾ ಮೂಲದ ಶಾಪಿಂಗ್ ಆಪ್ ಪಿಂಡುವುಡೊನ್ನು ಡಿಲೀಟ್ ಮಾಡುವಂತೆ ಪ್ಲೇಸ್ಟೋರ್ ಹೇಳಿದೆ.

ತಕ್ಷಣವೇ ಡಿಲೀಟ್ ಮಾಡದಿದ್ದರೆ ನಿಮ್ಮ ಖಾಸಗಿ ದಾಖಲೆಗಳು ಹಾಗೂ ಹಣದ ಮಾಹಿತಿಯನ್ನು ಕದ್ದು ಇನ್ಯಾರಿಗಾದರೂ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಈ ಆಪ್‌ನ್ನು ಸುಮಾರು 800 ಮಿಲಿಯನ್ ಬಳಕೆದಾರರು ಡೌನ್‌ಲೋಡ್ ಮಾಡಿದ್ದರು. ಆಪ್‌ನಲ್ಲಿ ಮಾಲ್ವೇರ್‌ನ್ನು ಒಳಗೊಂಡಿದ್ದನ್ನು ಪತ್ತೆ ಹಚ್ಚಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪ್ಲೇಸ್ಟೋರ್ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!