ಹೊಸದಿಗಂತ ಡಿಜಿಟಲ್ ಡೆಸ್ಕ್:
ನವೆಂಬರ್ 20 ರಂದು ನಡೆಯಲಿರುವ ಸಂಸತ್ತಿನ ಚುನಾವಣೆಯಲ್ಲಿ ತಮ್ಮ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ, ಭಾರತವು ಹಕ್ಕು ಸಾಧಿಸಿರುವ ನೇಪಾಳದ ಪ್ರದೇಶಗಳನ್ನು ಮರಳಿ ತರುತ್ತೇವೆ ಎಂದು ನೇಪಾಳದ ಮಾಜಿ ಪ್ರಧಾನಿ ಕೆಪಿ ಶರ್ಮಾ ಓಲಿ ಶುಕ್ರವಾರ ಹೇಳಿದ್ದಾರೆ.
ನೇಪಾಳ-ಭಾರತದ ಗಡಿಯ ಸಮೀಪದಲ್ಲಿರುವ ದೂರದ-ಪಶ್ಚಿಮ ನೇಪಾಳದ ದರ್ಚುಲಾ ಜಿಲ್ಲೆಯಲ್ಲಿ ತಮ್ಮ ಪಕ್ಷದ ರಾಷ್ಟ್ರವ್ಯಾಪಿ ಚುನಾವಣಾ ಪ್ರಚಾರವನ್ನು ಉದ್ಘಾಟಿಸಿ ಮಾತನಾಡಿದ ನೇಪಾಳದ ಕಮ್ಯುನಿಸ್ಟ್ ಪಾರ್ಟಿ (ಯುನಿಫೈಡ್ ಮಾರ್ಕ್ಸ್‌ವಾದಿ-ಲೆನಿನಿಸ್ಟ್) (CPN-UML) ಅಧ್ಯಕ್ಷ “ನಾವು ಕಾಲಾಪಾನಿ, ಲಿಪುಲೆಕ್ ಮತ್ತು ಲಿಂಪಿಯಾಧುರಾ ಸೇರಿದಂತೆ ಭೂಮಿಯನ್ನು ಮರಳಿ ತರುತ್ತೇವೆ, ನಮ್ಮ ಪಕ್ಷವು ರಾಷ್ಟ್ರವನ್ನು ರಕ್ಷಿಸಲು ಬದ್ಧವಾಗಿದೆ. ನಾವು ನಮ್ಮ ಭೂಮಿಯಲ್ಲಿ ಒಂದು ಇಂಚು ಕೂಡ ಬಿಡುವುದಿಲ್ಲ.” ಎಂದು ಹೇಳಿದ್ದಾರೆ.
ಏತನ್ಮಧ್ಯೆ, ರಾಜತಾಂತ್ರಿಕ ಉಪಕ್ರಮಗಳು ಮತ್ತು ಪರಸ್ಪರ ಸಂಬಂಧಗಳ ಆಧಾರದ ಮೇಲೆ ನೇಪಾಳದ ಅತಿಕ್ರಮಿತ ಭೂಮಿಯನ್ನು ಮರಳಿ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಶೇರ್ ಬಹದ್ದೂರ್ ದೇವುಬಾ ಹೇಳಿದ್ದಾರೆ ಎಂದು ಮೂಲಗಳು ಉಲ್ಲೇಖಿಸಿವೆ
ಮೇ 8, 2020 ರಂದು ಉತ್ತರಾಖಂಡದ ಧಾರ್ಚುಲಾದೊಂದಿಗೆ ಲಿಪುಲೇಖ್ ಪಾಸ್ ಅನ್ನು ಸಂಪರ್ಕಿಸುವ 80-ಕಿಮೀ ಉದ್ದದ ಆಯಕಟ್ಟಿನ ನಿರ್ಣಾಯಕ ರಸ್ತೆಯನ್ನು ಭಾರತವು ಉದ್ಘಾಟಿಸಿ ನಂತರ ನೇಪಾಳದೊಂದಿಗಿನ ಭಾರತದ ದ್ವಿಪಕ್ಷೀಯ ಸಂಬಂಧಗಳು ಆಗಿನ ಪ್ರಧಾನಿ ಓಲಿ ಅಡಿಯಲ್ಲಿ ಒತ್ತಡಕ್ಕೆ ಒಳಗಾಗಿತ್ತು.
ನೇಪಾಳವು ತನ್ನ ಪ್ರದೇಶದ ಮೂಲಕ ಹಾದುಹೋಗಿದೆ ಎಂದು ಹೇಳಿಕೊಂಡು ರಸ್ತೆಯ ಉದ್ಘಾಟನೆಯನ್ನು ಪ್ರತಿಭಟಿಸಿತ್ತು. ಕೆಲವು ದಿನಗಳ ನಂತರ, ನೇಪಾಳವು ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರಾವನ್ನು ತನ್ನ ಪ್ರಾಂತ್ಯಗಳಾಗಿ ತೋರಿಸುವ ಹೊಸ ನಕ್ಷೆಯನ್ನು ಬಿಡುಗಡೆಗೊಳಿಸಿತ್ತು ಈ ಕ್ರಮಕ್ಕೆ ಭಾರತ ಕಟುವಾಗಿ ಪ್ರತಿಕ್ರಿಯೆ ನೀಡಿದೆ.
ಪ್ರಸ್ತುತ ಅಧಿಕಾರದಿಂದ ಕೆಳಗಿಳಿದಿರುವ ಒಲಿ ಮತ್ತೊಮ್ಮೆ ಈ ವಿಷಯವನ್ನು ಚುನಾವಣಾ ಅಜೆಂಡಾವನ್ನಾಗಿಸಿಕೊಂಡು ಮುನ್ನೆಲೆಗೆ ತಂದಿದ್ದಾರೆ ಎನ್ನಲಾಗಿದೆ.