September 25, 2026
Friday, September 25, 2026
spot_img

AESTHETICS | ಹೊಸ ಮನೆ ಕಟ್ಟೋರು ಇದನ್ನೊಮ್ಮೆ ಓದಿ, ಗಾಳಿ-ಬೆಳಕು+ ಸೀಟಿಂಗ್‌ ಕೊಡೋ ‘Bay Window’

ಈಗ ಮನೆ ಕಟ್ಟಿಸ್ತಾ ಇದೀರಾ ಅಂದ್ರೆ ಇಲ್ಲೊಮ್ಮೆ ಕಣ್ಣಾಡಿಸಿ, ಮನೆಯ ಅಂದವನ್ನೂ ಹೆಚ್ಚಿಸಿ, ಗಾಳಿ ಬೆಳಕು ಹೆಚ್ಚು ಬರೋಕೆ ಸಹಾಯ ಮಾಡೋ ಬೇ ವಿಂಡೋ ಬಗ್ಗೆ ತಿಳಿದುಕೊಳ್ಳಿ..

ಬೇ ವಿಂಡೋ ಅಂದ್ರೆ ಕಿಟಕಿಯ ಪಕ್ಕದಲ್ಲೇ ಕುಳಿತುಕೊಳ್ಳೋದಕ್ಕೆ ಒಂದು ಜಾಗ. ಇದರಿಂದ ಮನೆಯ ಲುಕ್ಕೇ ಬದಲಾಗುತ್ತದೆ.

ಏನೆಲ್ಲಾ ಲಾಭ?

ಇಡೀ ದಿನ ಬೇರೆ ಬೇರೆ ಆಂಗಲ್‌ನಿಂದ ಬಿಸಿಲು ಹಾಗೂ ಗಾಳಿ ಮನೆಯ ಒಳಕ್ಕೆ ಬರುತ್ತದೆ.

ಸೋಫಾ, ಚೇರ್‌ ಮೇಲೆ ಕೂತರೂ ಇನ್ನೂ ಜನ ಇದ್ದಾರೆ ಅಂದ್ರೆ ಎಕ್ಸ್ಟ್ರಾ ಸಿಟ್ಟಿಂಗ್‌ ಸಿಗುತ್ತದೆ. ಹಾಯಾಗಿ ಕೂರಬಹುದು.

ವ್ಯೂ ಚೆನ್ನಾಗಿ ಸಿಕ್ಕರೆ ಅಲ್ಲೇ ಕುಳಿತು ಎಂಜಾಯ್‌ ಮಾಡಬಹುದು. ಮಳೆ ಬರುವ ದಿನ ಕೈಯಲ್ಲಿ ಒಂದು ಕಪ್‌ ಕಾಫಿ ಹಿಡಿದು ಕೂತರೆ, ಅಥವಾ ಕೈಯಲ್ಲೊಂದು ಪುಸ್ತಕ ಹಿಡಿದು ಕೂತರೆ ಚೆನ್ನಾಗಿರತ್ತೆ ಅಲ್ವಾ?

ಮನೆಯ ಅಂದ ಹೆಚ್ಚಾಗುತ್ತದೆ. ವಿಂಡೋಗೆ ಕುಷನ್‌ ಹಾಕಿ ದಿಂಬನ್ನು ಇಟ್ಟರೆ ನೋಡೋದಕ್ಕೆ ಚಂದ ಕಾಣುತ್ತದೆ.

ಇದನ್ನು ಎಲ್ಲಾ ಕಡೆಗೂ ಬಳಸಬಹುದು, ಹಾಲ್‌ ಹಾಗೂ ರೂಮ್‌, ಅಡುಗೆ ಮನೆಗೂ ಕೂಡ ಮಾಡಿಸಬಹುದು.

Must Read