ದಸರಾ ವೀಕ್ಷಣೆಗೆ ಮೈಸೂರಿಗೆ ಹೋಗೋದಾದ್ರೆ ಈ ಜಾಗಗಳಿಗೂ ಹೋಗಿಬನ್ನಿ..

ಕೊರೋನಾದಿಂದ ಎರಡು ವರ್ಷ ಕಳೆಗುಂದಿದ್ದ ಮೈಸೂರು ದಸರಾ ಈ ಬಾರಿ ಮತ್ತೆ ವೈಭವಪೂರಿತವಾಗಿ ನೆರವೇರಲಿದೆ. ಪ್ರತಿ ಬಾರಿ ದಸರಾ ವೀಕ್ಷಣೆಗೆ ಲಕ್ಷಾಂತರ ಮಂದಿ ಮೈಸೂರು ತಲುಪಲಿದ್ದು, ಈ ತಿಂಗಳು ಮೈಸೂರಿನಲ್ಲಿ ಎಲ್ಲಿ ನೋಡಿದರೂ ಬರೀ ಪ್ರವಾಸಿಗರೇ ಕಾಣುತ್ತಾರೆ. ದಸರಾ ನೋಡಲು ಮೈಸೂರಿಗೆ ತೆರಳಿದ್ದೇ ಆದರೆ ಈ ಸ್ಥಳಗಳನ್ನೂ ನೋಡಿಕೊಂಡು ಬನ್ನಿ..

ಮೈಸೂರಿನ ಪ್ರಮುಖ ಆಕರ್ಷಣೆ, ಅರಮನೆ. ಹೌದು, ಇದೀಗ ಹೆಚ್ಚು ಮಂದಿ ಅರಮನೆ ವೀಕ್ಷಣೆಗೆ ಬಂದಿರುತ್ತಾರೆ. ಆದರೂ ಮಿಸ್ ಮಾಡದೇ ಅರಮನೆ ನೋಡಿಕೊಂಡು ಬನ್ನಿ. 1861ರಲ್ಲಿ ರಾಜಕುಮಾರಿ ಮದುವೆಗಾಗಿ ಮೂರನೇ ಕೃಷ್ಣರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯನ್ನು ಕಟ್ಟಲಾಗಿದೆ. ಇನ್ನು ರಾತ್ರಿ ಅರಮನೆಯ ಲೈಟಿಂಗ್ ವೀಕ್ಷಣೆ ಮರೆಯದಿರಿ.

Mysore Palace: Information, History, Architecture, Timing, Entery Fee1804 ರಲ್ಲಿ ಗಾಥಿಕ್ ಶೈಲಿಯಲ್ಲಿ ಕಟ್ಟಲಾದ ಸೆಂಟ್ ಫಿಲೋಮಿನಾಸ್ ಚರ್ಚ್ ಮೈಸೂರಿನ ಪ್ರಮುಖ ಆಕರ್ಷಣೆಗಳಲ್ಲೊಂದು.

10 Famous Churches in Mysore You Will Admire | Veena Worldಮೈಸೂರಿಗೆ ಹೋದವರು ಚಾಮುಂಡಿ ಬೆಟ್ಟನೋಡದೇ ವಾಪಾಸಾಗುವ ಮಾತೇ ಇಲ್ಲ. ಈ ಸಮಯಲ್ಲಿ ಕ್ಯೂ ಹೆಚ್ಚೇ ಇರುತ್ತದೆ. ಬೆಳಗ್ಗೆ ಬೇಗ ಹೋಗುವುದು ಸೂಕ್ತ. ಇಲ್ಲಿ ಮಹಾಬಲೇಶ್ವರ ದೇವಾಲಯ, ಮಹಿಷಾಸುರ ಮೂರ್ತಿಯೂ ಇದೆ.

Chamundi Hills - Sandesh The Prince Mysuru1892 ರಲ್ಲಿ ಉದ್ಘಾಟನೆಯಾದ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಹೋಗಲು ಇದು ಸೂಕ್ತ ಸಮಯ. ನಾನಾ ಪ್ರಾಣಿಗಳು, ಎಂದೂ ನೋಡದ ಪಕ್ಷಿಗಳು ಇಲ್ಲಿವೆ. ಮಕ್ಕಳಿಗೆ ಈ ತಾಣ ಇಷ್ಟವಾಗುವುದು.

Head To Mysore Zoo For A Weekend Getaway | LBB, Bangalore1979 ರಲ್ಲಿ ಪಿ.ಎಂ. ಜೋಸೆಫ್ ಅವರ ಶ್ರಮದಿಂದ ಮೈಸೂರಿನಲ್ಲಿ ರೈಲ್ವೆ ಮ್ಯೂಸಿಯಂ ಆರಂಭವಾಗಿದೆ. ಗ್ರಾಫಿಕ್ಸ್ ಬಳಕೆಯಿಂದ ಭಾರತೀಯ ರೈಲಿನ ಬೆಳವಣಿಗೆ ತೋರಿಸಲಾಗಿದೆ.

Railway Museum, Mysore - Wikipediaಮೈಸೂರಿನಿಂದ ತುಸುವೇ ದೂರದಲ್ಲಿ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರಿಂದ ನಿರ್ಮಾಣಗೊಂಡಿರುವ ಲಲಿತ್ ಮಹಲ್ ನೋಡಲು ಅತ್ಯದ್ಭುತ. ಯುರೋಪ್ ಮಾದರಿಯ ಈ ಮಹಲ್ ನೋಡಲು ಮರೆಯದಿರಿ.

Lalitha Mahal Palace Hotel - Jungle Lodgesಕೆಆರ್‌ಎಸ್ ಬ್ಯಾಕ್‌ವಾಟರ‍್ಸ್ ನೋಡುವುದು ಮಿಸ್ ಮಾಡಬೇಡಿ, ಇಲ್ಲಿನ ಸೂರ್ಯಾಸ್ತ ನೋಡಲು ಎರಡು ಕಣ್ಣು ಸಾಲದು, ಪ್ರಶಾಂತವಾದ ಸ್ಥಳ ಇದಾಗಿದೆ.

karnataka venugopala swamy temple, 70 सालों तक पानी में रहा है कर्नाटक का  यह अनोखा मंदिर - interesting facts about karnataka venugopala swamy temple  krs backwaters - Navbharat Times

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!