ಆದ್ರೆ ಈಗ್ಲೇ ಹೂವು, ಹಣ್ಣು ತಂದಿಟ್ಕೊಳ್ಳಿ, ಹಬ್ಬಕ್ಕೆ ರೇಟ್‌ ಇನ್ನಷ್ಟು ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವಿಜಯದಶಮಿಗೆ ಕೌಂಟ್ ಡೌನ್ ಆರಂಭವಾಗಿದ್ದು ಹಬ್ಬಕ್ಕೆ ಹಣ್ಣು-ಹೂವಿನ ಬೆಲೆ ದುಬಾರಿಯಾಗಿದೆ. ಹೂವಿನ ಬೆಲೆ ಕೇಳಿ ಗ್ರಾಹಕರು ಶಾಕ್ ಆಗುತ್ತಿದ್ದಾರೆ. ಹಬ್ಬಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗ್ಲೇ ಹೂವಿನ ಬೆಲೆ ಗಗನಕ್ಕೆ ಏರಿದೆ. ಈ ದರ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ಕನಕಾಂಬರ ಕೆಜಿಗೆ 2000ರೂ ಇದೆ. ಮಲ್ಲಿಗೆ ಕೆಜಿಗೆ 1000 ರೂ. ಗುಲಾಬಿ ಕೆಜಿಗೆ 500 ರೂ. ಸೇವಂತಿಗೆ ಕೆಜಿಗೆ 450 ರೂ. ಸುಗಂಧರಾಜ ಕೆಜಿಗೆ 300 ರೂ. ಅಣಗಲು ಹೂ ಕೆಜಿ 700. ಚೆಂಡೂ ಹೂ 150. ಕಾಕಾಡ 800. ದುಂಡು ಮಲ್ಲಿಗೆ 800ರಿಂದ200. ಕಮಲ ಜೋಡಿಗೆ 70ರೂ ಇದೆ.

ಸೇಬು ಕೆಜಿಗೆ 120 ರಿಂದ 150ರೂ. ದಾಳಿಂಬೆ ಕೆಜಿಗೆ 250 ರೂ. ಏಲಕ್ಕಿ ಬಾಳೆ ಹಣ್ಣು ಕೆಜಿಗೆ 120 ರೂ. ಸೀತಾಫಲ 180 ರಿಂದ 140 ರೂ. ಸಪೋಟ 200 ರೂ. ದ್ರಾಕ್ಷಿ 180ರಿಂದ200 ರೂ. ಅನಾನಸ್ ಎರಡಕ್ಕೆ 50-100 ರೂ. ಕಿತ್ತಳೆ 50 ರಿಂದ 90 ರೂ. ಮೂಸುಂಬೆ 70 ರೂ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!