July 28, 2026
Tuesday, July 28, 2026
spot_img

ದಿನಭವಿಷ್ಯ: ಕಾರ್ಯಶೈಲಿ, ಚಿಂತನಾ ವೈಖರಿ ಬದಲಿಸಿಕೊಂಡರೆ ಕೆಲವು ಸಮಸ್ಯೆ ನೀಗಿಕೊಳ್ಳುವಿರಿ, ನೆಮ್ಮದಿಯ ದಿನ

ಮೇಷ
ವೃತ್ತಿಯಲ್ಲೂ ಖಾಸಗಿ ಬದುಕಲ್ಲೂ ಪೂರಕ ಬೆಳವಣಿಗೆ. ಶಂಕಾಸ್ಪದ ವ್ಯವಹಾರದಲ್ಲಿ ಹಣ ಹೂಡಬೇಡಿ. ಕೌಟುಂಬಿಕ ಸಾಮರಸ್ಯ. ಮಿತ್ರ ಭೇಟಿ.  
ವೃಷಭ
ಕಾರ್ಯಶೈಲಿ,  ಚಿಂತನಾ ವೈಖರಿ ಬದಲಿಸಿಕೊಂಡರೆ ಕೆಲವು ಸಮಸ್ಯೆ ನೀಗಿಕೊಳ್ಳುವಿರಿ. ನೆಮ್ಮದಿಯ ಬದುಕಿಗೆ ಇದು ದಾರಿ.          
ಮಿಥುನ
ಕೌಟುಂಬಿಕ ಕಾರ್ಯಕ್ರಮದಲ್ಲಿ ಭಾಗಿ. ನಿಮ್ಮ ಕೆಲಸಕ್ಕೆ ಟೀಕೆ ಕೇಳಿಬಂದೀತು. ಲೋಪ ಸರಿಪಡಿಸಿಕೊಳ್ಳಿ. ಹಠ ಹಿಡಿದು ಕೂರಬೇಡಿ.        
ಕಟಕ
ಕೆಲಸದಿಂದ ವಿರಾಮ ಪಡೆದು ಪ್ರವಾಸ ಹೊರಡಿ. ಒತ್ತಡ ನಿವಾರಣೆಗೆ ಇದು ದಾರಿ. ನಿರೀಕ್ಷೆ ಈಡೇರಿಸಲು ಹೆಚ್ಚು ಪರಿಶ್ರಮ ಅಗತ್ಯ.                  
ಸಿಂಹ
ಹಣದ ವ್ಯವಹಾರ ನಿರಾಶೆ ತಂದೀತು. ನೀವು ಬಯಸಿದ ಪ್ರಗತಿ ಕಾಣಿಸದು. ಶೀತದಂತಹ ಆರೋಗ್ಯ ಸಮಸ್ಯೆ. ಬಂಧುಗಳ ಜತೆ ಕಲಹ.      
ಕನ್ಯಾ
ನಿಮ್ಮ ಮನಸ್ಸಿನ ಮಾತು ಕೇಳಿ. ಇತರರ ಮಾತಿಗೆ ಮರುಳಾಗಿ ಕೆಟ್ಟ ನಿರ್ಧಾರ ತಾಳಬೇಡಿ. ಸಮಾರಂಭದಲ್ಲಿ ಭಾಗಿ. ಬಂಧುಮಿತ್ರರ ಭೇಟಿ.
ತುಲಾ
ಅನರ್ಹರ ಕುರಿತಂತೆ ಅಽಕ ಮುತುವರ್ಜಿ ವಹಿಸಿ ನಿಮ್ಮ ಶ್ರಮ ವ್ಯಯಿಸಬೇಡಿ. ಹಿತೈಷಿಗಳ ಮಾತು ಕೇಳಿ. ಕೌಟುಂಬಿಕ ಬಿಗು ಅಂತ್ಯ ಕಾಣಲಿದೆ.    
ವೃಶ್ಚಿಕ
ಹಣದ ಕೊರತೆ ಎದುರಿಸುವಿರಿ. ನಿಮ್ಮ ಮನೋಸ್ಥೈರ್ಯ ಕುಗ್ಗಿಸುವ ಜನರಿಂದ ದೂರವಿರಿ. ಏಕಾಂಗಿಗಳಿಗೆ ವಿವಾಹ ನೆಂಟಸ್ತಿಕೆ.    
ಧನು
ವೃತ್ತಿ ಗುರಿ ಸಾಧನೆ. ಸಣ್ಣಪುಟ್ಟ ಜಗಳದಲ್ಲಿ ಭಾಗವಹಿಸಬೇಡಿ. ಹಣಕಾಸು ವ್ಯವಹಾರದಲ್ಲಿ ಏರಿಳಿತ ಕಂಡೀತು. ಆರೋಗ್ಯ ಗಮನಿಸಿ.      
ಮಕರ
ನಿಮ್ಮ ಪ್ರಗತಿ ಯಾರೂ ತಡೆಯಲಾರರು. ನಿಮ್ಮ ಕಾರ್ಯನಿಷ್ಠೆ ಮೆಚ್ಚುಗೆ ಗಳಿಸುವುದು. ಖರ್ಚು ಏರಿಕೆ ಚಿಂತೆಗೆ ಕಾರಣವಾದೀತು.    
ಕುಂಭ
ಹೊರಗೆ ಸಂತೋಷ ಹುಡುಕಬೇಡಿ. ನಿಮ್ಮೊಳಗೇ ಅದು ಇದೆ. ಕುಟುಂಬದ ಜತೆ ಕಾಲ ಕಳೆಯಿರಿ. ಕಲಾವಿದರಿಗೆ ಪ್ರೋತ್ಸಾಹ ಸಿಗಲಿದೆ. ಧನಲಾಭ.    
ಮೀನ
ಹಣದ ವ್ಯವಹಾರ ತೃಪ್ತಿಕರ. ಕಾರ್ಯಸಾಫಲ್ಯ.ಆತ್ಮೀಯರ ಜತೆ ಕಾಲ ಕಳೆಯುವ ಅವಕಾಶ. ಸಂಬಂಧದಲ್ಲಿ ಪೊಸೆಸಿವ್ ಪ್ರವೃತ್ತಿ ಬಿಟ್ಟುಬಿಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !