HEALTH| ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ ಮಾಡಿದರೆ ದೇಹಕ್ಕೆ ಬೇಕಾದ ಕಬ್ಬಿಣಾಂಶ ಸಿಗುತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಬ್ಬಿಣವು ದೇಹಕ್ಕೆ ಅಗತ್ಯವಾದ ಪ್ರಮುಖ ಪೋಷಕಾಂಶವಾಗಿದೆ. ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಕಬ್ಬಿಣದ ಕೊರತೆಯು ತಲೆತಿರುಗುವಿಕೆ, ಆಯಾಸ ಮತ್ತು ನಿದ್ರೆಯಲ್ಲಿ ಉಸಿರುಕಟ್ಟುವಿಕೆಗೆ ಕಾರಣವಾಗಬಹುದು. ಹಾಗಾಗಿ ನಾವು ಸೇವಿಸುವ ಆಹಾರದಲ್ಲಿ ಕಬ್ಬಿಣಾಂಶವನ್ನು ಖಂಡಿತಾ ಇರಬೇಕು. ಇದರ ಜೊತೆಗೆ ಕಬ್ಬಿಣದ ಪಾತ್ರೆಗಳಲ್ಲಿ ದಿನನಿತ್ಯದ ಅಡುಗೆ ಮಾಡುವುದರಿಂದ ನೀವು ತಿನ್ನುವ ಆಹಾರದಲ್ಲಿ ಕಬ್ಬಿಣದ ಅಂಶ ಸೇರುತ್ತದೆ ಎಂಬುದು ಸಂಶೋಧನೆಯಿಂದ ಬಹಿರಂಗವಾಗಿದೆ.

ಕಬ್ಬಿಣದ ಪಾತ್ರೆಗಳು ದೇಹದಲ್ಲಿ ಕಬ್ಬಿಣದ ಮಟ್ಟವನ್ನು ಹೆಚ್ಚಿಸಲು ಹೇಗೆ ಸಹಾಯ ಮಾಡುತ್ತದೆ? ಎಂಬುದನ್ನು ಜರ್ನಲ್ ಆಫ್ ದಿ ಅಮೇರಿಕನ್ ಡಯೆಟಿಕ್ ಅಸೋಸಿಯೇಷನ್‌ ಅಧ್ಯಯನದ ನಡೆಸಿದೆ. ಇದರ ಪ್ರಕಾರ, ಕಬ್ಬಿಣದ ಪ್ಯಾನ್‌ಗಳಲ್ಲಿ ಅಡುಗೆ ಮಾಡುವ ಮೊದಲು ಮತ್ತು ನಂತರ 20 ರೀತಿಯ ಆಹಾರವನ್ನು ಪರೀಕ್ಷಿಸಲಾಗಿದೆ. ಆ ಪಾತ್ರೆಗಳಲ್ಲಿ ಬೇಯಿಸಿದ ಆಹಾರದಲ್ಲಿ ಸುಮಾರು 90 ಪ್ರತಿಶತದಷ್ಟು ಕಬ್ಬಿಣವು ಇರುತ್ತದೆ ಎಂಬುದು ಕಂಡುಬಂದಿದೆ. ಈ ಅಧ್ಯಯನದಲ್ಲಿ, ಕಬ್ಬಿಣದ ಪಾತ್ರೆಗಳಲ್ಲಿ ಆಮ್ಲೀಯ ಪದಾರ್ಥಗಳನ್ನು ಬೇಯಿಸಬಾರದು ಎಂಬುದು ಈ ಅಧ್ಯನದಿಂದ ಬಹಿರಂಗವಾಗಿದೆ. ಏಕೆಂದರೆ ಅವು ಆಹಾರದಲ್ಲಿರುವ ಪೋಷಕಾಂಶಗಳನ್ನು ನಾಶಪಡಿಸುತ್ತವೆ.

ಕಬ್ಬಿಣದ ಪಾತ್ರೆಗಳಲ್ಲಿ ನಿಂಬೆ ಮತ್ತು ವಿನೆಗರ್ ನಂತಹ ಅಡುಗೆ ಪದಾರ್ಥಗಳನ್ನು ಬಳಸಬಾರದು. ಅಡುಗೆ ಮಾಡಿದ ನಂತರ ಕಬ್ಬಿಣದ ಪ್ಯಾನ್ ಮೇಲೆ ಆಹಾರವನ್ನು ದೀರ್ಘಕಾಲ ಇಡಬಾರದು. ಕಬ್ಬಿಣದ ಪ್ಯಾನ್ ದೀರ್ಘಕಾಲ ಬಿಸಿಯಾಗಿರುತ್ತದೆ. ನೀವು ಗ್ಯಾಸ್ ಆಫ್ ಮಾಡಿದರೂ ಆಹಾರ ಬಿಸಿಯಾಗಿಯೇ ಇರುತ್ತದೆ. ಕಬ್ಬಿಣದ ಪಾತ್ರೆಗಳನ್ನು ಸ್ವಚ್ಛಗೊಳಿಸುವಾಗ ಗಟ್ಟಿಯಾದ ಸ್ಕ್ರಬ್ ನಿಂದ ಸ್ಕ್ರಬ್ ಮಾಡಬೇಡಿ. ಇದನ್ನು ಸ್ವಲ್ಪ ಉಪ್ಪು ಮತ್ತು ಅಡಿಗೆ ಸೋಡಾದೊಂದಿಗೆ ತೊಳೆದರೆ ಸ್ವಚ್ಛವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!