ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಮಾಸ್ ಉಗ್ರರು ಮೇಲೆ ಇಸ್ರೇಲ್ ದಾಳಿಗೆಗಾಜಾ ಜನತೆ ಬೆಚ್ಚಿ ಬಿದ್ದಿದ್ದಾರೆ. ಇದೀಗ ಇಸ್ರೇಲ್ ಸೇನೆ ಪ್ಯಾಲೆಸ್ತಿನ್ ಜನತೆಗೆ ಹೊಸ ಆಫರ್ ನೀಡಿದೆ. ಇಸ್ರೇಲ್‌ನಿಂದ ಹಮಾಸ್ ಉಗ್ರರು ವಶಕ್ಕೆ ಪಡೆದ ಒತ್ತೆಯಾಳುಗಳು ಎಲ್ಲಿದ್ದಾರೆ. ಈ ಕುರಿತ ಮಾಹಿತಿ ನೀಡಿದರೆ ನಿಮ್ಮ ಹಾಗೂ ಮಕ್ಕಳ ಬದುಕು ಶಾಂತಿಯುತವಾಗಿರುತ್ತದೆ. ಇಷ್ಟೇ ಅಲ್ಲ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ. ಜೊತೆಗೆ ನಿಮಗೆ ಹಾಗೂ ಕುಟುಂಬಕ್ಕೆ ಇಸ್ರೇಲ್ ಸೇನೆ ಗರಿಷ್ಠ ಭದ್ರತೆ ನೀಡಲಿದೆ. ಜೊತೆಹೆ ಬಹುಮಾನ ಮೊತ್ತವನ್ನು ನೀಡಲಾಗುತ್ತದೆ ಎಂದು ಹೇಳಿದೆ.
ಹಮಾಸ್ ಉಗ್ರರ ವಶದಲ್ಲಿರುವ ಇಸ್ರೇಲ್ ಒತ್ತೆಯಾಳುಗಳನ್ನು ಕೆಲ ಗಾಜಾ ಜನರ ಮನೆಯಲ್ಲಿರಿಸಲಾಗಿದ್ದುಹೀಗಾಗಿ ಹಮಾಸ್ ಉಗ್ರರು ಇದೀಗ ನಾಗರೀಕರ ಮನೆಗಳಿಂದ, ಬಂಕರ್‌ಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ನಿಖರ ಮಾಹಿತಿಯನ್ನು ನಮ್ಮ ಜೊತೆ ಹಂಚಿಕೊಳ್ಳಿ ಎಂದು ಇಸ್ರೇಲ್ ಸೇನೆ ಹೇಳಿದೆ. ಇದಕ್ಕಾಗಿ ಫೋನ್ ನಂಬರ್, ವ್ಯಾಟ್ಸ್ಆ್ಯಪ್, ಟೆಲಿಗ್ರಾಂ ಸಂಖ್ಯೆಯನ್ನು ಇಸ್ರೇಲ್ ಸೇನೆ ನೀಡಿದೆ.
ನೀವು ಶಾಂತಿಯುತ ಬದುಕು ಆಗ್ರಹಿಸಿದ್ದರೆ, ನಿಮ್ಮ ಮಕ್ಕಳ ಉತ್ತಮ ಭವಿಷ್ಯದ ಕನಸು ಕಂಡಿದ್ದರೆ, ನಮಗೆ ಒತ್ತೆಯಾಳುಗಳನ್ನು ಅಡಗಿಸಿಟ್ಟ ಸ್ಥಳದ ಮಾಹಿತಿ ನೀಡಿ. ಗಾಜಾ ಜನತೆ ನಡೆವೆ ಒತ್ತೆಯಾಳುಗಳನ್ನು ಅಡಗಿಸಡಲಾಗಿದೆ. ನಿಮ್ಮ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ. ಇಸ್ರೇಲ್ ಸೇನೆ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಗರಿಷ್ಠ ಭದ್ರತೆಯನ್ನು ಒದಗಿಸಲಿದೆ. ಇದರ ಜೊತೆಗೆ ಬಹುಮಾನ ಮೊತ್ತವನ್ನು ನೀಡುತ್ತೇವೆ ಎಂದು ಇಸ್ರೇಲ್ ಸೇನೆ ಹೇಳಿದೆ.