Friday, December 8, 2023

Latest Posts

ಅಲಗೇರಿ ವಿಮಾನ ನಿಲ್ದಾಣ ಯೋಜನೆ ಕುರಿತು ಸಿಎಂ ಸಿದ್ಧರಾಮಯ್ಯ ಜೊತೆ ಸಭೆ: ಮಾಜಿ ಶಾಸಕಿ ರೂಪಾಲಿ ನಾಯ್ಕ ಸ್ವಾಗತ

ಹೊಸದಿಗಂತ ವರದಿ, ಅಂಕೋಲಾ:

ತಾಲೂಕಿನಲ್ಲಿ ಅಲಗೇರಿಯಲ್ಲಿ ನಿರ್ಮಾಣ ಅಗಲಿರುವ ನೌಕಾನೆಲೆ ಮತ್ತು ನಾಗರಿಕ ವಿಮಾನ ನಿಲ್ದಾಣ ಯೋಜನೆಗೆ ಸಂಬಂಧಿಸಿದಂತೆ ಭೂ ಮಾಲಿಕರಿಗೆ ಹೆಚ್ಚಿನ ಪರಿಹಾರ ನೀಡುವ ದಿಶೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಲಗೇರಿ ವಿಮಾನ ನಿಲ್ದಾಣ ಸಂತ್ರಸ್ಥರು, ಉಸ್ತುವಾರಿ ಮಂತ್ರಿ, ಶಾಸಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸ್ವೀಕರಿಸಿದ ನಿರ್ಣಯಗಳು ಸ್ವಾಗತಾರ್ಹ ಎಂದು ಕಾರವಾರ ಅಂಕೋಲಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ತಿಳಿಸಿದ್ದಾರೆ.

ಪ್ರತಿ ನಿರಾಶ್ರಿತರ ಕುಟುಂಬಕ್ಕೂ ಯೋಗ್ಯ ಪರಿಹಾರ ದೊರಕುವಂತಾಗಲಿ, ಭೂಮಿ ಮತ್ತು ಮನೆ ಕಳೆದುಕೊಳ್ಳುವವರಿಗೆ ಉತ್ತಮ ರೀತಿಯ ಶಾಸ್ವತ ಪರಿಹಾರ ಯೋಗ್ಯ ಸ್ಥಳದಲ್ಲಿ ಪುನರ್ವಸತಿ, ಕುಟುಂಬದ ಸದಸ್ಯರಿಗೆ ಉದ್ಯೋಗ ದೊರಕಿಸಿ ಕೊಡುವತ್ತ ನಡೆಯುವ ಎಲ್ಲಾ ಪ್ರಯತ್ನಗಳಿಗೂ ತಮ್ಮ ಬೆಂಬಲ ಇದೆ ಎಂದು ತಿಳಿಸಿದ ಅವರು ಮುಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳಲ್ಲಿ ನಿರಾಶ್ರಿತರಾಗುವ ಕುಟುಂಬಗಳಿಗೆ ಉದ್ಯೋಗ ಮತ್ತು ಸೂಕ್ತ ಪರಿಹಾರ ಮತ್ತು ಪುನರ್ವಸತಿ ಕುರಿತು ಭೂ ಸ್ವಾಧೀನ ಕಾಯ್ದೆಯಲ್ಲೇ ಸೇರ್ಪಡೆ ಮಾಡಬೇಕಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಭಾರತೀಯ ಜನತಾ ಪಕ್ಷದ ಸರ್ಕಾರ ಇರುವ ಸಂದರ್ಭದಲ್ಲಿ ವಿಮಾನ ನಿಲ್ದಾಣ ನಿರಾಶ್ರಿತರ ಬೇಡಿಕೆಗಳನ್ನು ಆಲಿಸಿ ಅವರ ಬೇಡಿಕೆಗಳನ್ನು ಈಡೇರಿಸಲು ಸಂಪೂರ್ಣ ಪ್ರಯತ್ನಗಳನ್ನು ನಡೆಸಲಾಗಿತ್ತು ಪರಿಹಾರದ ವಿಷಯದಲ್ಲಿ ಬಿಜೆಪಿ ಆಡಳಿತದ ಸಮಯದಲ್ಲಿ ತಾರತಮ್ಯ ನಡೆದಿದೆ ಎಂದು ಕೆಲವರು ಹೇಳಿಕೆ ನೀಡುತ್ತಿರುವುದು ಸರಿಯಲ್ಲ, ಭೂ ಸ್ವಾಧೀನಕ್ಕೆ ಮೂರುಬಾರಿ ನೋಟಿಸ್ ನೀಡಲು ಅಧಿಕಾರಿಗಳು ಪ್ರಯತ್ನ ನಡೆಸಿದರೂ ಸ್ವತಃ ಮುಂದೆ ನಿಂತು ಅದನ್ನು ತಡೆ ಹಿಡಿಯುವ ಕೆಲಸ ಮಾಡಿದ್ದು ಶಿವರಾಮ ಹೆಬ್ಬಾರ ಮತ್ತು ಕೋಟ ಶ್ರೀನಿವಾಸ ಪೂಜಾರಿ ಇಬ್ಬರ ಉಸ್ತುವಾರಿ ಅವಧಿಯಲ್ಲೂ ನಿರಾಶ್ರಿತರೊಂದಿಗೆ ಅಧಿಕಾರಿಗಳ ಸಭೆ ನಡೆಸಿ ನಿರಾಶ್ರಿತರ ಬೇಡಿಕೆಗಳನ್ನು ಅತ್ಯಂತ ಗೌರವಪೂರ್ವಕವಾಗಿ ಆಲಿಸಲಾಗಿದೆ ಮತ್ತು ಆ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡುವ ಕೆಲಸ ಮಾಡಲಾಗಿದೆ ನಿರಾಶ್ರಿತರಾಗುವ ಪ್ರತಿ ಕುಟುಂಬಗಳ ಸದಸ್ಯರಿಗೆ ಉದ್ಯೋಗಾವಕಾಶ ನೀಡುವ ಕುರಿತು ನಿರಂತರವಾಗಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗಿದೆ ಇದು ಸ್ಥಳೀಯರಿಗೂ ಗೊತ್ತಿರುವ ವಿಷಯವಾಗಿದೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.

ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರದ ದಿನಗಳಲ್ಲಿ ಸಂಸದ ಅನಂತಕುಮಾರ ಹೆಗಡೆ ಅವರ ನೇತೃತ್ವದಲ್ಲಿ ನಿರಾಶ್ರಿತರ ನಿಯೋಗ ಕೇಂದ್ರಕ್ಕೆ ತೆರಳಿ ನಿರಾಶ್ರಿತರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟಾಗ ಅಂದಿನ ರಕ್ಷಣಾ ಸಚಿವರು ಕಾರವಾರಕ್ಕೆ ಬಂದು ಸುಮಾರು 600 ಕೋಟಿ ಪರಿಹಾರ ಹಣ ವಿತರಿಸಿದ್ದು ನಿರಾಶ್ರಿತರ ಜೊತೆ ನಿಂತ ಸಮಾಧಾನ ಇದೆ ಎಂದ ಅವರು ಅಂಕೋಲಾ ವಿಮಾನ ನಿಲ್ದಾಣ ಯೋಜನೆಯ ನಿರಾಶ್ರಿತರ ಜೊತೆ ಸದಾ ಇರುವುದಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!