ಮಕ್ಕಳ ಬಾಕ್ಸ್‌ಗೆ ಅಥವಾ ಟ್ರಾವೆಲ್ ಮಾಡುವಾಗ ಸೇಬಿನ ಹಣ್ಣನ್ನು ತೆಗೆದುಕೊಂಡು ಹೋಗೋದು ಕಷ್ಟ. ಏಕೆಂದರೆ ಕತ್ತರಿಸಿದ ಸ್ವಲ್ಪ ಸಮಯದಲ್ಲೇ ಸೇಬು ಕಪ್ಪಾಗಿ ರುಚಿ ಬದಲಾಗುತ್ತದೆ. ಆದರೆ ಈ ಪದಾರ್ಥ ಹಾಕಿದ್ರೆ ಸೇಬು ಕಪ್ಪಾಗೋದಿಲ್ಲ.
ಆ ಮ್ಯಾಜಿಕ್ ಪದಾರ್ಥ ಯಾವುದು ಗೊತ್ತಾ? ಉಪ್ಪು! ಹೌದು, ಉಪ್ಪನ್ನು ಬಳಸಿದ್ರೆ ಸೇಬು ಕಪ್ಪಾಗೋದಿಲ್ಲ. ಹೇಗೆ ಬಳಸೋದು ನೋಡಿ..
ವಿಧಾನ ಒಂದು
ಸೇಬನ್ನು ಕತ್ತರಿಸಿ ಅದಕ್ಕೆ ಉಪ್ಪನ್ನು ಸವರಿ ಬಾಕ್ಸ್‌ಗೆ ಹಾಕಬಹುದು.
ವಿಧಾನ ಎರಡು
ಒಂದು ಬೌಲ್‌ಗೆ ನೀರು, ಉಪ್ಪು ಹಾಕಿ ಮಿಕ್ಸ್ ಮಾಡಿ, ನಂತರ ಕತ್ತರಿಸಿದ ಆಪಲ್ ಅದಕ್ಕೆ ಹಾಕಿ, ನಂತರ ಒಂದು ನಿಮಿಷ ಬಿಟ್ಟು ತೆಗೆದುಬಿಡಿ. ಹೀಗೆ ಮಾಡಿದ ಸೇಬನ್ನು ಎರಡು ಗಂಟೆಯೊಳಗೆ ಸೇವನೆ ಮಾಡಿ. ಇಲ್ಲವಾದರೆ ಹುಳಿ ವಾಸನೆ ಬರುತ್ತದೆ.