ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಲೋಕದ ಸ್ವರ್ಗದಂತಿದ್ದ ಬ್ಯಾಂಕಾಕ್ ಭೂಕಂಪದ ಹೊಡೆತಕ್ಕೆ ತತ್ತರಿಸಿದೆ. ಹಿಂದೆ ಇಲ್ಲೊಂದು ಊರಿತ್ತಾ ಎನ್ನುವಷ್ಟರ ಮಟ್ಟಿಗೆ ಬದಲಾಗಿದೆ. ಕಟ್ಟಡಗಳ ಅಡಿಯನ್ನು ಕೆದಕಿದಷ್ಟು ಮೃತದೇಹಗಳು ಪತ್ತೆಯಾಗ್ತಿದ್ದು ರಕ್ಷಣಾ ಕಾರ್ಯ ಸದ್ಯಕ್ಕೆ ಮುಗಿಯುವಂತೆ ಕಾಣಿಸುತ್ತಿಲ್ಲ.
ಮಯನ್ಮಾರ್‌ನಲ್ಲಿ ಸಂಭವಿಸಿರುವ ಭೂಕಂಪ ಜನರನ್ನ ಅಕ್ಷರಶಃ ಆತಂಕಕ್ಕೆ ದೂಡಿದೆ. ಬೃಹತ್ ಕಟ್ಟಡಗಳು, ರಸ್ತೆ, ಸೇತುವೆಗಳ ಕುಸಿತ, ಸಾವುಗಳ ನೋವು ಸಾವಿರಾರು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಭೂಲೋಕದ ಸ್ವರ್ಗದಂತಿದ್ದ ಬ್ಯಾಕಾಂಕ್, ಮಯನ್ಮಾರ್, ಥೈಲ್ಯಾಂಡ್ ನರಕವಾಗಿ ಸಾವು-ನೋವಿನ ಕೂಪವಾಗಿದೆ. ಯಮರೂಪಿ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗ್ತಲೇ ಇದೆ.
ಮಯನ್ಮಾರ್ ಮತ್ತು ಥೈಲ್ಯಾಂಡ್ನಲ್ಲಿ ಸಂಭವಿಸಿದ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ ಏರಿಕೆಯಾಗ್ತಲೇ ಇದೆ. ನಿನ್ನೆಗೆ 1500ರ ಗಡಿದಾಟಿದ್ದ ಸಾವಿನ ಸಂಖ್ಯೆ, ಸದ್ಯ 1700ರ ಗಡಿಯನ್ನೂ ದಾಟಿದೆ. ಇನ್ನೂ ಸಾವಿನ ಸಂಖ್ಯೆ ಏರಿಕೆಯಾಗೋ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಭೂಕಂಪದಲ್ಲಿ ಸುಮಾರು 3,400ಕ್ಕೂ ಅಧಿಕ ಜನರು ಗಾಯಗೊಂಡಿದ್ದರೆ, 300ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದು ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.