ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾನ್ಸ್‌ಟೇಬಲ್ ಅಭ್ಯರ್ಥಿಯೊಬ್ಬರು ಫ್ಲೇಮ್ ಲಿಲ್ಲಿ ಗಡ್ಡೆ ತಿಂದು ಮೃತಪಟ್ಟಿದ್ದಾರೆ. ವಾಟ್ಸಾಪ್‌ನಲ್ಲಿ ಫ್ಲೇಮ್ ಲಿಲ್ಲಿ ಗಡ್ಡೆ ತಿಂದರೆ ದೇಹದಾರ್ಢ್ಯ ವೃದ್ಧಿಯಾಗುತ್ತದೆ ಎನ್ನುವ ಫಾರ್ವರ್ಡ್ ಮೆಸೇಜ್‌ನ್ನು ಕಾನ್ಸಟೇಬಲ್ ಅಭ್ಯರ್ಥಿ ಹಾಗೂ ಅವರ ಸ್ನೇಹಿತನಿಗೆ ಯಾರೋ ಕಳಿಸಿದ್ದರು. ಇದನ್ನು ನಂಬಿ ಗಡ್ಡೆ ತಿಂದು ಲೋಗನಾಥನ್ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರ ಸ್ನೇಹಿತನ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಲೋಗನಾಥನ್ ಹಾಗೂ ಅವರ ಸ್ನೇಹಿತ ತಿರುಪತ್ತೂರಿನ ಮಿನ್ನೂರಿನ ಕ್ವಾರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸ್ ಪಡೆಗೆ ಸೇರುವ ಆಸಕ್ತಿ ಇದ್ದ ಲೋಗನಾಥನ್ ಪೊಲೀಸ್ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಗಡ್ಡೆ ತಿಂದಿದ್ದಾರೆ.