Monday, September 26, 2022

Latest Posts

ರೆಫ್ರಿಜಿರೇಟರ್‌ನಲ್ಲಿ ದೀರ್ಘಕಾಲ ಸಂಗ್ರಹಿಸಿಟ್ಟ ಆಹಾರ ಸೇವಿಸುತ್ತಿದ್ದೀರಾ? ಜಾಗ್ರತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರೆಫ್ರಿಜರೇಟರ್ ಇತ್ತೀಚಿನ ದಿನಗಳಲ್ಲಿ ಅತಿದೊಡ್ಡ ತಾಂತ್ರಿಕ ಪ್ರಗತಿಗಳಲ್ಲಿ ಒಂದಾಗಿದೆ. ಉಳಿದ ತಿಂಡಿ, ತರಕಾರಿ, ಹಣ್ಣುಗಳೆಲ್ಲವನ್ನ ಫ್ರಿಡ್ಜ್ ನಲ್ಲಿಡುವುದು ಅನೇಕರಿಗೆ ಅಭ್ಯಾಸವಾಗಿಬಿಟ್ಟಿದೆ. ಕೆಲವು ಆಹಾರಗಳು ಫ್ರಿಡ್ಜ್ ನಲ್ಲಿ ದೀರ್ಘಕಾಲ ಶೇಖರಿಸಿಟ್ಟರೆ ಕೆಡುವ ಸಾಧ್ಯತೆ ಹೆಚ್ಚು. ಯಾವ್ಯಾವು ಗೊತ್ತಾ?

  • ಮೊಟ್ಟೆಗಳನ್ನು ಫ್ರಿಡ್ಜ್ ನಲ್ಲಿಟ್ಟಾಗ ಅದರಲ್ಲಿ ಒಂದು ರೀತಿಯ ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ.
  • ಅನ್ನ, ಚಟ್ನಿ, ದಾಲ್, ಸೂಪ್ ಮುಂತಾದ ಆಹಾರ ಪದಾರ್ಥಗಳನ್ನು ಸಹ ಇಡೀ ದಿನ ಫ್ರಿಡ್ಜ್ ನಲ್ಲಿಟ್ಟರೆ ಅವುಗಳ ಪೌಷ್ಟಿಕಾಂಶ ಕಳೆದು ಹೋಗುತ್ತದೆ.
  • ಇಪ್ಪತ್ನಾಲ್ಕು ಗಂಟೆಗಳ ನಂತರ ರೆಫ್ರಿಜರೇಟೆಡ್ ಆಹಾರವನ್ನು ತಿನ್ನುವುದು ಒಳ್ಳೆಯದಲ್ಲ. ಅವುಗಳ ಮೇಲೆ ಬ್ಯಾಕ್ಟೀರಿಯಾಗಳು ರೂಪುಗೊಳ್ಳುತ್ತವೆ. ಗ್ಯಾಸ್ ಸಮಸ್ಯೆ ಇರುತ್ತದೆ. ಆಹಾರ ವಿಷವಾಗುವ ಸಂಭವವಿದೆ.
  • ಹಸಿ ತರಕಾರಿಗಳು ಮತ್ತು ಹಣ್ಣುಗಳನ್ನು ಖರೀದಿಸುವಾಗ ಅಥವಾ ಕೋಳಿ ಮತ್ತು ಮಾಂಸ ಅಥವಾ ಚೀಸ್ ನಂತಹ ಬೇಯಿಸದ ಆಹಾರವನ್ನು ಸರಿಯಾಗಿ ತೊಳೆದು ಫ್ರಿಜ್ನಲ್ಲಿ ಸಂಗ್ರಹಿಸಬೇಕು.
  • ತಾಜಾ ಆಹಾರ ಆರೋಗ್ಯಕರ. ಫ್ರೀಜರ್ ಆಹಾರವು ಅದರ ಬಣ್ಣ, ರುಚಿ ಮತ್ತು ವಾಸನೆಯನ್ನು ಕಳೆದುಕೊಳ್ಳುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!