GOOD FOOD | ಈ ಆಹಾರ ಸಿಕ್ಕಿದ್ರೆ ಖಂಡಿತ ಬಿಡ್ಬೇಡಿ…ಯಾಕೆ ಗೊತ್ತೇ?

ಯೆಸ್‌…ಈ ಆಹಾರ ಸಿಕ್ಕಿದ್ರೆ ಖಂಡಿತಾ ಬಿಡ್ಬೇಡಿ. ಯಾಕಂದ್ರೆ ಇದನ್ನು ತಿಂದದ್ದೇ ಆದಲ್ಲಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಉತ್ತಮ ಪೋಷಕಾಂಶಗಳನ್ನು ಹೊಂದಿದ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಶಕ್ತಿ ಈ ಆಹಾರಕ್ಕೆ ಇದೆ. ಹಾಗಾದ್ರೆ ಯಾವುದು ನೋಡೋಣ.

ರಾಗಿ ಇದೊಂದು ಪೂರ್ಣಾಹಾರ. ಇದರಲ್ಲಿ ಆರೋಗ್ಯಕ್ಕೆ ಬೇಕಾಗುವ ಸಾಕಷ್ಟು ಪೋಷಕಾಂಶಗಳಿವೆ. ಹೆಚ್ಚಿನ ಫೈಬರ್‌ ಹೊಂದಿದ್ದು ಚಯಾಪಚಯ ಕ್ರಿಯೆ, ಜೀರ್ಣ ಕ್ರಿಯೆಗಳನ್ನು ಉತ್ತಮಗೊಳಿಸುತ್ತವೆ. ನಿಮ್ಮ ಆಹಾರದ ಮೆನುವಿನಲ್ಲಿ ರಾಗಿಯ ಉಪ್ಪಿಟ್ಟು ಜೊತೆಗಿರಲಿ. ಹಾಗಾದ್ರೆ ರಾಗಿಯ ಉಪ್ಪಿಟ್ಟು ಮಾಡುವುದು ಹೇಗೆ ಎಂದು ನೋಡೋಣ. ರಾಗಿಯು ಉತ್ತಮ ಕಾರ್ಬೋಹೈಡ್ರೇಟ್‌, ಪ್ರೊಟೀನ್‌, ಫೈಬರ್‌, ವಿಟಮಿನ್‌ ಒಳಗೊಂಡಿದ್ದು ಮೂಳೆಗಳ ಬೆಳವಣಿಗೆ ಹೆಚ್ಚಿಸುತ್ತದೆ. ಇದರಲ್ಲಿರುವ ನಾರಿನಾಂಶ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಮಲಬದ್ಧತೆ ತಡೆಯಲು ಸಹಕಾರಿಯಾಗುತ್ತದೆ. ಹಿಮೋಗ್ಲೋಬಿನ್‌ ಹೆಚ್ಚುವಂತೆ ಮಾಡುತ್ತದೆ. ಕೊಲೆಸ್ಟ್ರಾಲ್‌ ಮಟ್ಟ ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯ ಉತ್ತಮಗೊಳಿಸುತ್ತದೆ.

ಬೇಕಾಗುವ ಸಾಮಾಗ್ರಿಗಳು:  ರಾಗಿ ಹಿಟ್ಟು ಎರಡು ಕಪ್, ಕತ್ತರಿಸಿದ ಈರುಳ್ಳಿ‌ ಒಂದು ಕಪ್, ಟೊಮ್ಯಾಟೋ, ಕ್ಯಾರೆಟ್, ಕ್ಯಾಪ್ಸಿಕಂ ಸಣ್ಣ ತುಂಡುಗಳನ್ನಾಡಿ ಮಾಡಿ ಒಂದು ಕಪ್‌ ಆಗುವಷ್ಟು ಮಿಕ್ಸ್‌ ಮಾಡಿಡಿ ‌ , ಹಸಿ ಮೆಣಸಿನಕಾಯಿ ಒಂದು, ಶುಂಠಿ ಒಂದು ಸಣ್ಣ ತುಂಡು , ಕರಿಬೇವಿನ ಎಲೆ, ಶುದ್ಧ ತೆಂಗಿನೆಣ್ಣೆ , ಜೀರಿಗೆ ಕಾಲು ಸ್ಪೂನ್, ಉದ್ದಿನ ಬೇಳೆ‌ ಒಂದು ಟೀ ಸ್ಪೂನ್, ಕಡಲೆಬೇಳೆ‌ ಅರ್ಧ ಟೀ ಸ್ಪೂನ್, ಉಪ್ಪು‌ ರುಚಿಗೆ ಬೇಕಾದಷ್ಟು, ಕೊತ್ತಂಬರಿ ಸೊಪ್ಪು, ನಿಂಬೆ ರಸ.

ಈ ರೀತಿ ಮಾಡಿ: ರಾಗಿ ಹಿಟ್ಟನ್ನು ಬಾಣಲೆಯಲ್ಲಿ ಚೆನ್ನಾಗಿ ಫ್ರೈ ಮಾಡಿ. ಹುರಿದ ಹಿಟ್ಟನ್ನು ಪ್ರತ್ಯೇಕ ಪಾತ್ರೆಗೆ ಬದಲಾಯಿಸಿ. ಅದೇ ಬಾಣಲೆಯಲ್ಲಿ ನಾಲ್ಕು ಟೀ ಸ್ಪೂನ್‌ ತೆಂಗಿನೆಣ್ಣೆ ಹಾಕಿ ಬಿಸಿಮಾಡಿ. ಉದ್ದಿನಬೇಳೆ, ಸಾಸಿವೆ, ಜೀರಿಗೆ, ಕಡಲೇಬೇಳೆ ಹಾಕಿ ಹುರಿಯಿರಿ. ಮೆಣಸಿನ ಕಾಯಿಯನ್ನು ಕತ್ತರಿಸಿ ಹಾಕಿ. ಶುಂಠಿಯನ್ನು ಜಜ್ಜಿ ಹಾಕಿ. ಕರಿಬೇವಿನೆಲೆ ಸೇರಿಸಿ. ಈರುಳ್ಳಿ ಹಾಗೂ ಇತರೆ ತರಕಾರಿಗಳ ಹೋಳುಗಳನ್ನು ಹಾಕಿ ಚೆನ್ನಾಗಿ ಫ್ರೈಮಾಡಿ.

ನೀರು ಹಾಕಿ. ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಕುದಿಯಲು ಬಿಡಿ. ಚೆನ್ನಾಗಿ ಕುದಿದ ನಂತರ ರಾಗಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಕಲಸುತ್ತಿರಿ. ಉಂಡೆಕಟ್ಟದಂತೆ ಗಮನ ಹರಿಸಿ. ರಾಗಿ ಹಿಟ್ಟು ಸಂಪೂರ್ಣ ಬೆಂದನಂತರ ಬಾಣಲೆಯನ್ನು ಕೆಳಗಿಡಿ. ಸ್ವಲ್ಪ ಲಿಂಬೆ ರಸ ಹಾಗೂ ಕಬಾಣಲೆಗೆತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಸರ್ವ್‌ ಮಾಡಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!