September 26, 2026
Saturday, September 26, 2026
spot_img

ಮನೆಯಲ್ಲಿ ಪನೀರ್‌ ಇದ್ರೆ ಆಯ್ತು ಈ ಟೇಸ್ಟಿ ಸ್ನಾಕ್ಸ್‌ ಮಾಡಿ ತಿನ್ನಬಹುದು, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು

ಪನೀರ್
ಅಚ್ಚಖಾರದ ಪುಡಿ
ಅರಿಶಿನ
ಗರಂ ಮಸಾಲೆ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಉಪ್ಪು
ನಿಂಬೆ ರಸ

ಮಾಡುವ ವಿಧಾನ

ನಿಮಗೆ ಬೇಕಾದ ಶೇಪ್‌ನಲ್ಲಿ ಪನೀರ್ ಕತ್ತರಿಸಿ ಒಂದು ಪಾತ್ರೆಯಲ್ಲಿ ಹಾಕಿ, ಇದರ ಜೊತೆಗೆ ಮೆಣಸಿನ ಪುಡಿ, ಅರಿಶಿನ, ಗರಂ ಮಸಾಲೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಮತ್ತು ನಿಂಬೆ ರಸ ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ.

ಮತ್ತೊಂದು ಪಾತ್ರೆಯಲ್ಲಿ ಮೈದಾ, ಕಾರ್ನ್‌ಫ್ಲೋರ್, ಅಚ್ಚಖಾರದ ಪುಡಿ, ಕಾಳುಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ. ಸ್ವಲ್ಪ ನೀರು ಹಾಕಿ ಗಟ್ಟಿಯಾದ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಮ್ಯಾರಿನೇಟ್ ಮಾಡಿದ ಪನೀರ್ ತುಂಡನ್ನು ಮೊದಲು ಮೈದಾ ಮಿಶ್ರಣದಲ್ಲಿ ಅದ್ದಿ, ನಂತರ ಬ್ರೆಡ್ ಕ್ರಂಬ್ಸ್‌ನಲ್ಲಿ ಚೆನ್ನಾಗಿ ಉರುಳಿಸಿ.

ಎಲ್ಲಾ ಪನೀರ್ ತುಂಡುಗಳಿಗೂ ಇದೇ ರೀತಿ ಕೋಟಿಂಗ್ ಮಾಡಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಮಧ್ಯಮ ಉರಿಯಲ್ಲಿ ಪನೀರ್ ಫಿಂಗರ್ಸ್‌ಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಗರಿಗರಿಯಾಗಿ ಕರಿಯಿರಿ. ಕರಿದ ಪನೀರ್ ಫಿಂಗರ್ಸ್‌ಗಳನ್ನು ಟಿಶ್ಯೂ ಪೇಪರ್ ಮೇಲೆ ತೆಗೆದು ಹೆಚ್ಚುವರಿ ಎಣ್ಣೆ ಹೀರಿಕೊಳ್ಳಲು ಬಿಡಿ. ಎಣ್ಣೆಯಲ್ಲಿ ಮುಳುಗಿಸೋಕೆ ಇಷ್ಟಇಲ್ಲ ಎನ್ನುವುದಾದರೆ ಏರ್‌ಫ್ರೈಯರ್‌ ಅಥವಾ ತವಾ ಫ್ರೈ ಕೂಡ ಮಾಡಬಹುದು.

Must Read