HEALTH | ಈ ಲಕ್ಷಣಗಳು ಕಾಣಿಸಿದ್ರೆ ನಿಮಗೆ ಥೈರಾಯ್ಡ್‌ ಸಮಸ್ಯೆ ಬಂದಿರಬಹುದು, ಯಾವುದು??

ಬೆಳಗ್ಗೆ ಎದ್ದ ತಕ್ಷಣ ಈ ಲಕ್ಷಣಗಳು ಕಾಣಿಸಿದ್ರೆ ನಿಮಗೆ ಥೈರಾಯ್ಡ್‌ ಇರಬಹುದು, ನೀವು ಬ್ಲಡ್‌ ಟೆಸ್ಟ್‌ ಮೂಲಕ ಇದನ್ನು ಕಂಡುಹಿಡಿಯಬಹುದಾಗಿದೆ.

ರಾತ್ರಿ ಚೆನ್ನಾಗಿ ನಿದ್ರೆ ಮಾಡಿದ ನಂತರವೂ, ಬೆಳಗ್ಗೆ ಎದ್ದ ತಕ್ಷಣ ನಿಮಗೆ ದಣಿವು ಮತ್ತು ಶಕ್ತಿಯ ಕೊರತೆ ಅನಿಸಬಹುದು. ಇದು ಥೈರಾಯ್ಡ್ ಹಾರ್ಮೋನುಗಳ ಕೊರತೆಯಿಂದ ಉಂಟಾಗುತ್ತದೆ. ಇದು ಚಯಾಪಚಯ ಕ್ರಿಯೆಯ ದರವನ್ನು ಕಡಿಮೆ ಮಾಡುತ್ತದೆ.

ಬೆಳಗ್ಗೆ ಎದ್ದಾಗ ಕಣ್ಣು ಮತ್ತು ಮುಖದ ಸುತ್ತಲೂ ಊತ ಕಾಣಿಸಿಕೊಂಡರೆ ಇದು ಸಾಮಾನ್ಯ ಸಮಸ್ಯೆಯಲ್ಲ. ಇದು ದೇಹದಲ್ಲಿ ದ್ರವದ ಮಟ್ಟದಲ್ಲಿನ ಹೆಚ್ಚಳದಿಂದ ಉಂಟಾಗುತ್ತದೆ. ಇದು ಹೈಪೋಥೈರಾಯ್ಡ್ ಸಮಸ್ಯೆಯನ್ನು ಸೂಚಿಸುತ್ತದೆ.

ಥೈರಾಯ್ಡ್ ಸಮಸ್ಯೆ ಇರುವವರ ಚರ್ಮ ಒರಟು ಮತ್ತು ಒಣ ಚರ್ಮವಾಗಿರುತ್ತದೆ. ಅದೇ ರೀತಿ ಬೆಳಗ್ಗೆ ಹೊತ್ತು ಕೂದಲು ಒಣಗಿರುತ್ತದೆ. ಇದು ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದ ಇವು ಉಂಟಾಗುತ್ತದೆ.

ಬೆಳಗ್ಗೆ ಎದ್ದಾಗ ನಿಮ್ಮ ಹೃದಯ ಬಡಿತ ಹೆಚ್ಚಿದೆ ಎಂದು ನಿಮಗೆ ಅನಿಸಿದರೆ, ಇದು ಹೈಪರ್ ಥೈರಾಯ್ಡಿಸಮ್‌ನ ಸಂಕೇತವಾಗಿರಬಹುದು. ಇದು ಹಾರ್ಮೋನುಗಳ ಅಸಮತೋಲನದಿಂದ ಉಂಟಾಗುತ್ತದೆ.

ಥೈರಾಯ್ಡ್ ಸಮಸ್ಯೆ ಇರುವವರು ಬೆಳಗ್ಗೆ ಎದ್ದ ನಂತರವೂ ಅಸಹನೆ, ಕಿರಿಕಿರಿ ಮತ್ತು ಒತ್ತಡವನ್ನು ಅನುಭವಿಸುತ್ತಾರೆ. ಕೆಲವೊಮ್ಮೆ ದೇಹ ಮತ್ತು ಮನಸ್ಸಿನಲ್ಲಿ ಆಯಾಸವನ್ನು ಅನುಭವಿಸುತ್ತಾರೆ. ಇದಲ್ಲದೇ, ಥೈರಾಯ್ಡ್ ಹಾರ್ಮೋನುಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!