ಒಂದು ವರ್ಷ ಕಳೆದುಹೋಗಿ ಇದೀಗ ಒಂಬತ್ತು ದಿನಗಳಾಗಿವೆ. ಜನವರಿ ಯಾವಾಗ ಬಂತು? ಒಂಬತ್ತು ದಿನ ಯಾವಾಗ ಕಳೆಯಿತು ಅನ್ನೋದೇ ಗೊತ್ತಾಗಿಲ್ಲ ಅಲ್ವಾ? ದಿನಗಳು ಹೀಗೆ ಉರುಳಿ ಹೋಗ್ತವೆ. ಬಟ್ ಒಂದು ವರ್ಷದಲ್ಲಿ ಎಷ್ಟೊಂದು ಪಾಠ ಕಲಿತಿದ್ದೀವಿ ಅಲ್ವಾ? ಹೆಚ್ಚಿನ ಜನರು ಈ ಪಾಠಗಳನ್ನು ಕಲಿತು ಮುಂದೆ ಬಂದಿದ್ದಾರಂತೆ. ಇದರಲ್ಲಿ ನೀವು ಒಬ್ಬರಾ ನೋಡಿ..
ಹೊಸ ಹೊಸ ಅವಕಾಶಗಳಿಗೆ ನೋ ಎಂದು ಹೇಳಿಲ್ಲ.
ನಮ್ಮ ಲೈಫ್‌ನಲ್ಲಿ ಎಷ್ಟೊಂದು ಜನ ಬರ್ತಾರೆ, ಹೋಗ್ತಾರೆ. ಇದು ಕಾಮನ್ ಅನ್ನೋದನ್ನು ಅರ್ಥ ಮಾಡ್ಕೊಂಡಿದ್ದೇವೆ.
ಬೇರೆಯವರನ್ನು ಬದಲಾಯಿಸಲು ಸಾಧ್ಯವಿಲ್ಲ. ನಾವು ಬದಲಾಗಬಹುದು ಅಷ್ಟೆ.
ಎಲ್ಲರೂ ಮನಸಿನಲ್ಲಿ ನಮ್ಮ ಬಗ್ಗೆ ಒಳ್ಳೆಯದನ್ನೇ ಯೋಚಿಸೋದಿಲ್ಲ.
ನಿಮ್ಮ ಸುತ್ತಮುತ್ತಲಿನ ಸರ್ಕಲ್ ಸಣ್ಣದಿದ್ದಷ್ಟು ಬೆಟರ್
ಕೆಲವೊಮ್ಮೆ ಇರೋ ಜಾಗವನ್ನು ಬಿಟ್ಟು ಹೋಗೋದೊಂದೇ ದಾರಿ.
ಕರುಣೆ ಅನ್ನೋದು ಯಾವಾಗಲೂ ಬೆಸ್ಟ್. ಇದು ಓಲ್ಡ್ ಫ್ಯಾಷನ್ ಆಗೋಕೆ ಸಾಧ್ಯ ಇಲ್ಲ.
ಜನ ನಿಮ್ಮನ್ನು ಇಷ್ಟಪಡಬಾರದು ಅಂತ ಡಿಸೈಡ್ ಮಾಡಿದ್ರೆ ನೀವು ಏನು ಸರ್ಕಸ್ ಮಾಡಿದ್ರೂ ಅವರ ಅಟೆಂಷನ್ ತೆಗೆದುಕೊಳ್ಳೋದಕ್ಕೆ ಆಗೋದಿಲ್ಲ.
ಯಾವುದೇ ವ್ಯಕ್ತಿ ನಿಮ್ಮನ್ನು ಎರಡು ಬಾರಿ ರಿಜೆಕ್ಟ್ ಮಾಡುವ ಅವಕಾಶ ಕೊಡಬೇಡಿ.
ಮನಸಿನ ಗಟ್ ಫೀಲಿಂಗ್‌ಗೆ ಬೆಲೆ ಕೊಡಿ
ನೀವು ಇಲ್ಲದ ರೀತಿ ಇನ್ನೊಬ್ಬರಿಗಾಗಿ ಬದಲಾಗಬೇಡಿ.
ಪಾಸ್ಟ್ ಮರೆತುಬಿಡಿ. ಜೀವನದ ಟೈಮಿಂಗ್ ಮೇಲೆ ನಂಬಿಕೆ ಇಡಿ.