ತೂಕ ಇಳಿಸಿದರೆ ಕ್ಷೇತ್ರದ ಅನುದಾನ ನೀಡುವೆ ಎಂದ ಗಡ್ಕರಿ: ಸಚಿವರ ಮಾತಿಗೆ 15 ಕೆಜಿ ತೂಕ ಇಳಿಸಿದ ಸಂಸದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಿಜೆಪಿ ನಾಯಕ ಮತ್ತು ಮಧ್ಯಪ್ರದೇಶದ ಉಜ್ಜಯಿನಿ ಸಂಸದ ಅನಿಲ್ ಫಿರೋಜ್ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಯೋಗ, ಈಜು ಮತ್ತು ಸೈಕ್ಲಿಂಗ್‌ ಮೂಲಕ ಶ್ರಮಿಸಿ ತಮ್ಮ ತೂಕವನ್ನು ಇಳಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಸಂಸದರು ಕ್ಷೇತ್ರಾಭಿವೃದ್ಧಿಗೆ ಹಣಕ್ಕಾಗಿ ದೆಹಲಿಗೆ ಹೋಗುತ್ತಾರೆ. ಹೋದಾಗ ಅಭಿವೃದ್ಧಿಯ ಕೂತಿರು ಮಾತನಾಡಿ ಕೇಂದ್ರ ಸರಕಾರದಿಂದ ಅನುದಾನ ಪಡೆಯುತ್ತಾರೆ.
ಆದರೆ ಸಂಸದ ಅನಿಲ್ ಫಿರೋಜ್ ಅನುದಾನ ಕೇಳಲು ಹೋದಾಗ ಪ್ರತಿ ಕೆಜಿ ತೂಕ ನಷ್ಟ ಮಾಡಿಕೊಂಡಲ್ಲಿ 1 ಸಾವಿರ ಕೋಟಿ ಅಭಿವೃದ್ಧಿ ಕಾರ್ಯಗಳಿಗೆ ನೀಡುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದರು.
ಅವರ ಈ ಮಾತಿನಂತೆ ಇದೀಗ ಉಜ್ಜಯಿನಿಯ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ ಬರೋಬ್ಬರಿ 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ.
ಗಡ್ಕರಿ ಅವರು ಫೆಬ್ರುವರಿಯಲ್ಲಿ ಹಲವು ಯೋಜನೆಗಳ ಶಂಕುಸ್ಥಾನಪನೆ ಸಮಾರಂಭದಲ್ಲಿ ಫಂಡ್ಸ್ ಫಾರ್​ ಫ್ಲಾಬ್ ಭರವಸೆ ನೀಡಿದ ನಂತರ ಸಂಸದರು 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇವರು ಫೆಬ್ರುವರಿಯಲ್ಲಿ 127 ಕೆಜಿ ತೂಕ ಇದ್ದರು ಎಂದು ಹೇಳಲಾಗಿತ್ತು.
ಸಾರ್ವಜನಿಕ ಸಭೆಯಲ್ಲಿ ಗಡ್ಕರಿ ಮಾತನಾಡಿದ ದಿನದಿಂದಲೂ ಸಂಸದ ಅನಿಲ್ ಫಿರೋಜಿಯಾ ತೂಕ ಇಳಿಸುವತ್ತ ಗಮನ ಹರಿಸಿದರು. ಪ್ರತಿನಿತ್ಯ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದೇನೆ. ಈಗ 127 ಕೆಜಿಯಿಂದ 112 ಕೆಜಿಗೆ 15 ಕೆಜಿ ಕಳೆದುಕೊಂಡಿದ್ದಾರೆ.
ಇದೀಗ ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ತೂಕ ಇಳಿಸುವ ಬಗ್ಗೆ ಕೇಂದ್ರ ಸಚಿವ ಗಡ್ಕರಿ ಅವರಿಗೆ ತಿಳಿಸುವುದಾಗಿ ಸಂಸದ ಅನಿಲ್ ಫಿರೋಜಿಯಾ ಹೇಳಿದ್ದಾರೆ. ಗಡ್ಕರಿ ಅವರು ಉಜ್ಜಯಿನಿ ಕ್ಷೇತ್ರಕ್ಕೆ 15,000 ಕೋಟಿ ರೂ.ಗಳನ್ನು ಒದಗಿಸುವ ನಿರೀಕ್ಷೆಯಿದೆ ಎಂದು ಸಂಸದರು ಹೇಳಿದರು.
ಈ ಕುರಿತು ಮಾತನಾಡಿರುವ ಸಂಸದ ಅನಿಲ್, ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆ ಆಗುವುದಾದರೆ ಖಂಡಿತವಾಗಿ ನಾನು ಇನ್ನೊಂದಿಷ್ಟು ತೂಕವನ್ನು ಇಳಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!