September 4, 2026
Friday, September 4, 2026
spot_img

ಸಿಹಿ ಅಂದ್ರೆ ತುಂಬಾ ಇಷ್ಟ ಅನ್ನೋರು ಮಿಸ್‌ ಮಾಡದೇ ಗೆಣಸಿನ ಸಿಹಿ ತಿಂಡಿ ಟ್ರೈ ಮಾಡಿ ನೋಡಿ..

ಸಿಹಿ ಅಂದ್ರೆ ತುಂಬಾ ಇಷ್ಟ. ಆದರೆ ಸಕ್ಕರೆ ಪದಾರ್ಥ ತಿಂದು ತೂಕ ಹೆಚ್ಚಾಗ್ತಿದೆ ಎಂದು ಬೇಸರಿಸಿಕೊಳ್ಳೋ ಮಂದಿಯಲ್ಲಿ ನೀವೂ ಒಬ್ಬರಾಗಿದ್ರೆ ಮಿಸ್‌ ಮಾಡದೇ ಈ ಆರೋಗ್ಯಕರ ಗೆಣಸಿನ ಸಿಹಿತಿಂಡಿಯನ್ನು ಮಾಡಿ. ಇದನ್ನು ಬ್ರೇಕ್‌ಫಾಸ್ಟ್‌ ರೀತಿಯಲ್ಲಿ ಕೂಡ ಸವಿಯಬಹುದು..

ಸಾಮಾಗ್ರಿಗಳು: ಗೆಣಸು, ಕೋಕೋ ಪೌಡರ್‌, ಬೆಲ್ಲ, ಹಾಲು, ಡಾರ್ಕ್‌ ಚಾಕೋಲೆಟ್‌, ವಾಲ್ನಟ್‌, ಬಾದಾಮಿ

ಮಾಡುವ ವಿಧಾನ

ಮೊದಲು ಏರ್‌ ಫ್ರೈಯರ್‌ ಅಥವಾ ಪಾತ್ರೆಯೊಂದರಲ್ಲಿ ಗೆಣಸನ್ನು ಬೇಯಲು ಇಡಿ. ಗೆಣಸು ಬೆಂದ ನಂತರ ಸಿಪ್ಪೆ ತೆಗೆದು ತಣ್ಣಗಾಗಲು ಬಿಡಿ

ಆನಂತರ ಗೆಣಸನ್ನು ಮಿಕ್ಸಿಗೆ ಹಾಕಿ, ಜೊತೆಗೆ ಕೋಕೋ ಪೌಡರ್‌, ಬೆಲ್ಲ ಹಾಗೂ ಹಾಲನ್ನು ಹಾಕಿ ಬ್ಲೆಂಡ್‌ ಮಾಡಿ

ನಂತರ ಇದನ್ನು ಬೌಲ್‌ಗೆ ಹಾಕಿ ಮಧ್ಯದಲ್ಲಿ ಡಾರ್ಕ್‌ ಚಾಕೋಲೆಟ್‌ ಚಂಕ್ಸ್‌ ಹಾಕಿ

ಮೇಲೆ ವಾಲ್ನಟ್‌, ಚಾಕೋಲೆಟ್‌ ಹಾಗೂ ಬಾದಾಮಿ ಹಾಕಿ, ನಂತರ ಏರ್‌ಫ್ರೈ ಅಥವಾ ಅವನ್‌ನಲ್ಲಿ ಬೇಯಿಸಿದರೆ ಹೆಲ್ತಿಯಾದ ರೆಸಿಪಿ ತಯಾರಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !