ಡೀಪ್‌ಫೇಕ್ ವಿಡಿಯೋ ಮಾಡಿದ್ರೆ ಮೂರು ವರ್ಷ ಜೈಲು, ಮತ್ತೊಮ್ಮೆ ಎಚ್ಚರಿಕೆ ಕೊಟ್ಟ ಕೇಂದ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡೀಪ್‌ಫೇಕ್ ವಿಡಿಯೋ ಮಾಡಿ ಜನರ ಮಾನಸಿಕ, ಸಾಮಾಜಿಕ ಜೀವನಕ್ಕೆ ಧಕ್ಕೆ ತರುವ ವಿಡಿಯೋ ಕ್ರಿಯೇಟರ್‌ಗಳಿಗೆ ಹಾಗೂ ಅದನ್ನು ಹಂಚುವ ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.

ನಕಲಿ ಫೋಟೊ, ವಿಡಿಯೋಗಳ ಬಗ್ಗೆ ಯಾರಾದರೂ ಬಂದು ದೂರು ಸಲ್ಲಿಸಿದಲ್ಲಿ, ದೂರು ಸಲ್ಲಿಕೆಯಾದ ೨೪ ಗಂಟೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಡಿಲೀಟ್ ಮಾಡಬೇಕು. ಇಲ್ಲವಾದರೆ ಮೂರು ವರ್ಷ ಜೈಲು ಹಾಗೂ ಒಂದು ಲಕ್ಷ ರೂಪಾಯಿ ದಂಡ ನೀಡಬೇಕಾಗುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ನಟಿ ರಶ್ಮಿಕಾ ಮಂದಣ್ಣ ಮುಖವನ್ನು ಬೇರೊಬ್ಬ ನಟಿಯ ದೇಹಕ್ಕೆ ಅಟ್ಯಾಚ್ ಮಾಡಿ ಅಪ್‌ಲೋಡ್ ಮಾಡಲಾಗಿತ್ತು. ವಿಡಿಯೋ ಎಷ್ಟು ನೈಜವಾಗಿ ಕಂಡಿತ್ತೆಂದರೆ, ಜನರು ಅದು ರಶ್ಮಿಕಾ ಎಂದೇ ನಂಬಿ ಇವರ‍್ಯಾಕೆ ಇಂಥ ಬಟ್ಟೆ ಹಾಕಿದ್ದಾರೆ, ಸರಿಯಾದ ರೀತಿಯ ಬಟ್ಟೆ ಧರಿಸಿ ಎಂದೆಲ್ಲಾ ಕಮೆಂಟ್ ಮಾಡಿದ್ದರು. ಇ ಡೀಪ್‌ಫೇಕ್ ವಿರುದ್ಧ ನಟಿ ರಶ್ಮಿಕಾ ದನಿಯೆತ್ತಿದ್ದು, ಸೆಲೆಬ್ರಿಟಿಗಳು ಸಾಥ್ ನೀಡಿ ವಿಷಯ ಮುನ್ನೆಲೆಗೆ ಬಂದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!