ಐ ಫೋನ್ ಕದ್ದರೆ ಸಿಕ್ಕಿಬೀಳೋದು ಗ್ಯಾರಂಟಿ! ಮೊಬೈಲ್ ಕದ್ದು ಪೊಲೀಸರಿಗೆ ಅತಿಥಿಯಾದ ಗ್ಯಾಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಿಕ್​ ಪಾಕೆಟ್​​ ಗ್ಯಾಂಗ್ ಒಂದು​ ಮೊಬೈಲ್​ ಕದ್ದು ಪೊಲೀಸರಿಗೆ ಅತಿಥಿಯಾದ ಘಟನೆ ಬೆಂಗಳೂರಿನ ಯಶವಂತಪುರದ ಆರ್​​ಎಂಸಿ ಯಾರ್ಡ್​​​ ನಲ್ಲಿ ನಡೆದಿದೆ.

ಯಶವಂತಪುರ ಹೂವಿನ ಮಾರ್ಕೆಟ್ ನಲ್ಲಿ ಸಿತಾರ ಎಂಬ ಮಹಿಳೆಯ ಐ ಫೋನ್ 16 Pro ಮೊಬೈಲ್ ಕದ್ದು ಕಳ್ಳರು ಪರಾರಿಯಾಗಿದ್ದರು. ಈ ಬಗ್ಗೆ ಮಹಿಳೆ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಐ ಫೋನ್ 16 Pro ಮೊಬೈಲ್ ನಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿದರೂ ಲೊಕೇಷನ್ ಸಿಗುತ್ತೆ. ಇದರಿಂದ ಐ ಫೋನ್ ನ ಫೈಂಡ್ ಮೈ ಡಿವೈಸ್ ಬಳಸಿ ಪೊಲೀಸರು ಖದೀಮರ ಲೊಕೇಶನ್ ಪತ್ತೆ ಹಚ್ಚಿದ್ದಾರೆ.

ಮೊಬೈಲ್ ಫೋನ್ ಜೊತೆಗೆ ಆರೋಪಿಗಳಾದ ಶುಬಿನ್, ಅಹ್ಮದ್, ಥೋಪಿಕ್ ಹಾಗೂ ಫೈಜಲ್ ನನ್ನು ಬಂಧಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!