ಕ್ರಿಕೆಟ್‌ ಆಡಬೇಕೆಂದು ಬಯಸಿದ್ರೆ, ಕೀಳುಮಟ್ಟದ ಮನಸ್ಥಿತಿಯಿಂದ ಹೊರಬರಬೇಕು: ಶಕೀಬ್‌ ವಿರುದ್ಧ ಕಿಡಿ ಕಾರಿದ ಮಾಥ್ಯೂಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಾಂಗ್ಲಾ ಆಟಗಾರ ಶಕೀಬ್‌ ಅಲ್‌ ಹಸನ್‌ (Shakib Al Hasan) ಮತ್ತು ಬಾಂಗ್ಲಾದೇಶ ತಂಡ ಮಾಡಿದ್ದು ನಿಜಕ್ಕೂ ಅವಮಾನಕರ ಕೃತ್ಯ. ಕ್ರಿಕೆಟ್‌ ಆಡಬೇಕೆಂದು ಬಯಸಿದ್ರೆ. ಇಂತಹ ಕೀಳುಮಟ್ಟದ ಮನಸ್ಥಿತಿಯಿಂದ ಹೊರಬರಬೇಕು ಎಂದು ಶ್ರೀಲಂಕಾ ಕ್ರಿಕೆಟರ್ ಏಂಜಲೋ ಮಾಥ್ಯೂಸ್ (Angelo Mathews) ಕಿಡಿ ಕಾರಿದ್ದಾರೆ.

ಸೋಮವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ (Sri Lanka) ತಂಡವು ಸೋಲನುಭವಿಸಿದ ನಂತರ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಅವರು, ಶಕೀಬ್‌ ಅಲ್‌ ಹಸನ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಶಕೀಬ್‌ ಅಲ್‌ ಹಸನ್‌ ಮಾಡಿದ್ದು, ನಿಜಕ್ಕೂ ಅವಮಾನಕರ ಕೃತ್ಯ. ಅವರ ಸಾಮಾನ್ಯ ಜ್ಞಾನ ಎಲ್ಲಿ ಹೋಯ್ತು ಅನ್ನೋದು ನನಗೆ ಗೊತ್ತಾಗಲಿಲ್ಲ. ಅವರು ಕ್ರಿಕೆಟ್‌ ಆಡಬೇಕೆಂದು ಬಯಸಿದ್ರೆ. ಇಂತಹ ಕೀಳುಮಟ್ಟದ ಮನಸ್ಥಿತಿಯಿಂದ ಹೊರಬರಬೇಕು ಎಂದು ಹೇಳಿದರು.

ಯಾವುದೇ ಒಬ್ಬ ಆಟಗಾರ ಔಟಾದ ಬಳಿಕ ಮುಂದಿನ ಆಟಗಾರ 2 ನಿಮಿಷದ ಒಳಗೆ ಕ್ರೀಸ್‌ನಲ್ಲಿ ಇರಬೇಕು ಏಂದು ಐಸಿಸಿ ನಿಯಮ ಹೇಳುತ್ತದೆ. ನಾನೂ ಕೂಡ 2 ನಿಮಿಷದಲ್ಲೇ ಕ್ರೀಸ್‌ನಲ್ಲಿ ಇದ್ದೆ. ಆದ್ರೆ ನನ್ನ ಹೆಲ್ಮೆಟ್‌ ಒಡೆದಿತ್ತು. ಬದಲಿ ಹೆಲ್ಮೆಟ್‌ ಪಡೆದ ನಂತರವೂ ಇನ್ನೂ 5ಕ್ಕೂ ಹೆಚ್ಚು ಸೆಕೆಂಡುಗಳನ್ನು ಹೊಂದಿದ್ದೆ. ಆದರೂ ಔಟ್‌ ನೀಡಿದ್ದು ಅಮಾನವೀಯ ಎಂದು ಕಿಡಿಕಾರಿದರಲ್ಲದೇ ನಾನು ಶಕೀಬ್‌ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ಆದ್ರೆ ಇಂತಹ ಘಟನೆಯ ನಂತರ ಅವರ ಮೇಲೆ ನನಗಿದ್ದ ಮನಸ್ಥಿತಿ ಬದಲಾಗಿದೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here