ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಸಕರಿಗೆ ಐಪಿಎಲ್ ಟಿಕೆಟ್ ಫ್ರೀಯಾಗಿ ಕೊಡಬೇಕು ಅನ್ನೋ ವಿಚಾರದ ಬಗ್ಗೆ ಮಾಜಿ ಸಂಸದ ಡಿ.ಕೆ. ಸುರೇಶ್ ಮಾತನಾಡಿದ್ದಾರೆ.
ಶಾಸಕರಿಗೆ ನಾಲ್ಕು ಐಪಿಎಲ್ ಟಿಕೆಟ್ ಕೊಡ್ಬೇಕು ಅನ್ನೋ ಡಿಮ್ಯಾಂಡ್ ಬಂದಿದೆ. ಇದೆಲ್ಲಾ ತಪ್ಪು. ಐಪಿಎಲ್ ಬಗ್ಗೆ ಆಸಕ್ತಿ ಇದ್ರೆ ದುಡ್ಡು ಕೊಟ್ಟು ಟಿಕೆಟ್ ತೆಗೆದುಕೊಳ್ಳಿ ಎಂದಿದ್ದಾರೆ.
ಇಷ್ಟ ಇರೋರು ಅವರೇ ಹೋಗಿ ಟಿಕೆಟ್ ತೆಗೆದುಕೊಳ್ಳಬೇಕು. ಐಪಿಎಲ್ ಆಸಕ್ತಿ ಇರೋರು ಕಾಸು ಕೊಟ್ಟು ನೋಡೋದು ಒಂದೊಳ್ಳೆ ರೀತಿಯ ಬೆಳವಣಿಗೆ. ಏಕೆಂದ್ರೆ ಅದು ರಾಷ್ಟ್ರೀಯ ಕ್ರೀಡೆ ಅಲ್ಲ, ಕರ್ಮಷಿಯಲ್ ಗೇಮ್ ಅಷ್ಟೇ ಎಂದಿದ್ದಾರೆ.



