September 14, 2026
Monday, September 14, 2026
spot_img

ನಿಮ್ಮ ಕೆಲಸದಲ್ಲಿ ಒತ್ತಡ ಜಾಸ್ತಿಯಾಗ್ತಿದೆ ಎಂದಾದ್ರೆ ಈ ಮೂರು ವಿಷಯಗಳನ್ನು ನೆನಪಿಡಿ

ದಿನವೂ ಇಷ್ಟವಿಲ್ಲದೇ ಎದ್ದು ಕಣ್ಣುಜ್ಜುತ್ತಲೇ ಸ್ನಾನದ ಕೋಣೆಗೆ ಹೋಗಿ ಬ್ರಶ್‌ ಮಾಡಿ, ಸ್ನಾನ ಮಾಡಿ, ಯುನಿಫಾರ್ಮ್‌ ಹಾಕಿಕೊಂಡು, ಒಂದೆರಡು ತುತ್ತು ಬಾಯಲ್ಲಿಟ್ಟುಕೊಂಡು, ಲಂಚ್‌ ಬಾಕ್ಸ್‌ ಕೈಯಲ್ಲಿಟ್ಟುಕೊಂಡು ಶೂ ಹಾಕಿಕೊಂಡು ಹೊರಡೋ ಶಾಲೆಯ ಮಕ್ಕಳಿಗೂ ಆಫೀಸ್‌ಗೆ ಹೋಗೋ ಜನರಿಗೂ ಜಾಸ್ತಿ ವ್ಯತ್ಯಾಸ ಇಲ್ಲ. ಇಷ್ಟವೋ ಕಷ್ಟವೋ ದಿನವೂ ಕೆಲಸಕ್ಕೆ ಹಾಜರಿ ಹಾಕ್ತಾರೆ. ತಿಂಗಳ ಕೊನೆಯಲ್ಲಿ ಸಂಬಳ ಎಣಿಸಿದಾಗ ಸಾರ್ಥಕತೆ ಫೀಲಿಂಗ್‌ ಇರುತ್ತದೆ. ಸಾರ್ಥಕತೆ ಇಲ್ಲದೆ ದುಡ್ಡಿಗಾಗಿ ಕೆಲಸ ಮಾಡೋರೂ ಇದ್ದಾರೆ ಅವರ ಕಥೆ ಬೇರೆಯೇ ಇದೆ. ಎಷ್ಟೇ ಕಷ್ಟ ಎಂದುಕೊಂಡರೂ ಕೆಲಸ ಇಲ್ಲದೇ ಹೋದ್ರೆ? ಇಮ್ಯಾಜಿನ್‌ ಮಾಡೋಕೆ ಆಗೋದಿಲ್ಲ.

ಕೆಲಸದಲ್ಲಿ ನೆಮ್ಮದಿ ಸ್ವಲ್ಪ ಇದೆ, ಪ್ರೆಶರ್‌ ಹೆಚ್ಚಿದೆ ಎನ್ನುವವರು ಈ ವಿಷಯಗಳನ್ನು ಮನಸಿನಲ್ಲಿ ಇಡಿ..

ನೀವು ಮಾಡುವ ಕೆಲಸ ನಿಮಗೆ ತೃಪ್ತಿ ನೀಡುತ್ತಿದೆಯಾ? ದಿನವೂ ಮನೆಗೆ ಹೋಗಿ ಮಲಗಿದಾಗ ಸಾರ್ಥಕತೆ ಫೀಲಿಂಗ್‌ ಬರ್ತಾ ಇದೆಯಾ? ಅಥವಾ ಬೆಳಗ್ಗೆ ಎದ್ದಾಗ ಥೋ ಇವತ್ತೂ ಆಫೀಸ್‌ ಹೋಗ್ಬೇಕಾ ಅನಿಸ್ತಾ ಇದೆಯಾ? ಇದಕ್ಕೆಲ್ಲಾ ಉತ್ತರ ನೋ ಅನ್ನೋದಾದ್ರೆ ಬೇರೆ ಕೆಲಸ ಹುಡುಕೋಕೆ ಶುರು ಮಾಡಿ.

ಕೆಲಸ ಚೆನ್ನಾಗಿಯೇ ಇದೆ ಒಂದೊಂದು ಬಾರಿ ಮಾತ್ರ ಪ್ರೆಶರ್‌ ಆಗತ್ತೆ ಅನ್ನೋ ಕಾರಣಕ್ಕೆ ಕೆಲಸ ಚೇಂಜ್‌ ಮಾಡೋ ಯೋಚನೆ ಮಾಡ್ತಿದ್ರೆ ಈ ಯೋಚನೆಯನ್ನು ಇಂದೇ ಡ್ರಾಪ್‌ ಮಾಡಿ. ನೀವು ಯಾವ ಕೆಲಸಕ್ಕೆ ಹೋದರೂ ಒಂದು ದಿನವಾದ್ರೂ ಪ್ರೆಶರ್‌ ಟೆನ್ಶನ್‌ ಇದ್ದೇ ಇರುತ್ತದೆ. ತಲೆ ಕೆಡಿಸಿಕೊಳ್ಳಬೇಡಿ. ಇನ್ನೂ ಸ್ವಲ್ಪ ವರ್ಷ ದೂಡಿ.

ಸ್ಟ್ರೆಸ್‌ ಮ್ಯಾನೇಜ್‌ಮೆಂಟ್‌ ಬಗ್ಗೆ ತಿಳಿದುಕೊಳ್ಳಿ. ತಲೆಗೆ ಒತ್ತಡ ಎಂದಾದರೆ ಏನು ಮಾಡಬಹುದು? ತಕ್ಷಣ ಏನು ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಿ. ಇದು ಕೆಲಸದಿಂದ ನಿಮ್ಮ ಆರೋಗ್ಯ ಹಾಳಾಗುವುದನ್ನು ತಪ್ಪಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !