ದೇಶದ ಭವಿಷ್ಯಕ್ಕೆ ಐಐಐಟಿ ಧಾರವಾಡ ವಿಶೇಷ ಕೊಡುಗೆ ನೀಡಲಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದ ಭವಿಷ್ಯಕ್ಕೆ ಐಐಐಟಿ ಧಾರವಾಡ ವಿಶೇಷ ಕೊಡುಗೆ ನೀಡಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

ಇಂದು ಧಾರವಾಡದಲ್ಲಿ ಐಐಐಟಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಐಐಐಟಿ ಧಾರವಾಡಕ್ಕೆ ಶಾಶ್ವತ ಕ್ಯಾಂಪಸ್ ಆಗಿದೆ.ಜ್ಞಾನ ವಿಕಾಸ ಎಂದು ಹೆಸರಿಡಲಾಗಿದೆ. ಜ್ಞಾನದಲ್ಲಿ ವಿಕಾಸ ಅಡಗಿದೆ. ಭಾರತವನ್ನು ವಿಶ್ವಗುರು ಮಾಡಬೇಕಾಗಿದೆ. ಇಲ್ಲಿನ ವಿದ್ಯಾರ್ಥಿಗಳು ವಿವಿಧ ಕಂಪನಿ, ಸಂಸ್ಥೆಗಳಲ್ಲಿ ಕೆಲಸ ಮಾಡಿ ಬೆಳೆಯಲಿ ಎಂದು ಆಶಿಸಿದರು.

ಸಾಧಾರಣ ಕುಟುಂಬದಿಂದ ಬಂದ ನನ್ನನ್ನು ನಿಮ್ಮ ಊರಿಗೆ ಕರೆಯಿಸಿ ಸನ್ಮಾನ ಮಾಡಿದ್ದೀರಿ. ಇದು ನನಗೊಬ್ಬಳಿಗೆ ಮಾಡಿದ ಸನ್ಮಾನವಲ್ಲ. ಇದೇ ಭಾರತದ ಮಹಿಳಾ ಕುಲಕ್ಕೆ ಮಾಡಿದ ಸತ್ಕಾರ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಸ ವ್ಯಕ್ತಪಡಿಸಿದ್ದಾರೆ.
ಐತಿಹಾಸಿಕ ನಗರದ ಭಾಗವಾಗಿರುವ ನಿಮಗೆಲ್ಲಾ ಶುಭಾಶಯಗಳು. ಕನ್ನಡ, ಮರಾಠಿ ಭಾಷೆಗಳ ಸಂಗಮ ಇಲ್ಲಿದೆ. ಎಲ್ಲಾ ಜಾತಿ ಧರ್ಮದ ಜನರು ಇಲ್ಲಿ ಸೌಹಾರ್ದತೆಯಿಂದ ಬದುಕುತ್ತಿದ್ದೀರಿ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!