ಪಾಸಿಟಿವ್ ಇಂಪ್ಯಾಕ್ಟ್ ರೇಟಿಂಗ್‌ನಲ್ಲಿ ಈ ವರ್ಷವೂ 5ನೇ ಸ್ಥಾನ ಉಳಿಸಿಕೊಂಡ ‘ಐಐಎಂ ಬೆಂಗಳೂರು’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಸಿಟೀವ್ ಇಂಪ್ಯಾಕ್ಟ್ ರೇಟಿಂಗ್ (PIR) 2023 ನಲ್ಲಿ ಐಐಎಂ ಬೆಂಗಳೂರು ಕಳೆದ ವರ್ಷದಂತೆಯೇ ಈ ವರ್ಷ ಕೂಡ ಉತ್ಕೃಷ್ಟ ವಿಭಾಗದಲ್ಲಿ (ಲೆವೆಲ್ 5) ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

ವರ್ಷದಿಂದ ವರ್ಷಕ್ಕೆ ಪಿಐಆರ್ ಶ್ರೇಯಾಂಕದಲ್ಲಿ ಐಐಎಂಬಿ ಅಗ್ರಸ್ಥಾನ ಪಡೆಯುತ್ತಿರುವುದು ಉತ್ತೇಜನಕಾರಿಯಾಗಿದೆ. ಭಾರತೀಯ ಶಾಲೆಗಳು ಜಾಗತಿಕವಾಗಿ ಪಿಐಆರ್ನಲ್ಲಿ ಉನ್ನತ ಮಟ್ಟವನ್ನು ಸಾಧಿಸುವುದನ್ನು ನೋಡಲು ಹೆಮ್ಮೆ ಎನಿಸುತ್ತದೆ ಎಂದು ಐಐಎಂಬಿ ನಿರ್ದೇಶಕ ಪ್ರೊಫೆಸರ್ ರಿಷಿಕೇಶ ಟಿ. ಕೃಷ್ಣನ್ ಹೇಳಿದ್ದಾರೆ.

ಪಿಐಆರ್ ಎಂದರೇನು? 

ಪಿಐಆರ್ ಎನ್ನುವುದು ವಿದ್ಯಾರ್ಥಿಗಳಿಂದ ಮತ್ತು ವಿದ್ಯಾರ್ಥಿಗಳಿಗೆ ನಡೆಸುವ ಸಮೀಕ್ಷೆಯಾಗಿದೆ. ಐದು ಖಂಡಗಳು ಮತ್ತು 25 ದೇಶಾದ್ಯಂತ ಇರುವ 71 ಬಿಸಿನೆಸ್ ಸ್ಕೂಲ್ಗಳಿಂದ 12,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ.  ಒಟ್ಟಾರೆ PIR ಸ್ಕೋರ್ 2021 ರಲ್ಲಿ 7.3 ರಿಂದ 2022 ರಲ್ಲಿ 7.6 ಕ್ಕೆ ಮತ್ತು 2023 ರಲ್ಲಿ 7.7 ಕ್ಕೆ ಏರಿಕೆಯಾಗಿದೆ.

ಸ್ವಿಟ್ಜರ್ಲೆಂಡ್ನ VIVA Idea (ಕೋಸ್ಟಾ ರಿಕಾ), ದಿ ಇನ್ಸ್ಟಿಟ್ಯೂಟ್ ಫಾರ್ ಬಿಸಿನೆಸ್ ಸಸ್ಟೈನೆಬಿಲಿಟಿ ಫೌಂಡೇಷನ್ ಆಂಡ್ ಫೆಹರ್ ಅಡ್ವೈಸ್ ಬೆಂಬಲಿತ ಸಮೀಕ್ಷೆ ಇದಾಗಿದೆ. ಈ ಸಮೀಕ್ಷೆಯಲ್ಲಿ ವಿಶ್ವಾದ್ಯಂತ ವಿದ್ಯಾರ್ಥಿಗಳು ತಮ್ಮ ಬಿಸಿನೆಸ್ ಸ್ಕೂಲ್ಗಳು ಜಾಗತಿಕವಾಗಿ ಹೇಗೆ ಧನಾತ್ಮಕ ಪರಿಣಾಮ ಬೀರುತ್ತವೆ ಎಂಬುದರ ಕುರಿತು ಮೌಲ್ಯಮಾಪನ ಮಾಡುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!