ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾಕುಂಭ ಮೇಳದ ಸಮಯದಲ್ಲಿ ಐಐಟಿ ಬಾಬ ಎಂದೇ ಖ್ಯಾತಿ ಗೊಂಡಿರುವ ಅಭಯ್ ಸಿಂಗ್ ಐಪಿಎಲ್ ಟೂರ್ನಿ ಕುರಿತು ಭವಿಷ್ಯ ನುಡಿದು ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ಐಐಟಿ ಬಾಬಾ ಭವಿಷ್ಯ ನುಡಿದು ಎಲ್ಲರ ಕೈಯಿಂದ ಟ್ರೋಲ್ ಆಗಿದ್ದರು. ಇದೀಗ ಐಪಿಎಲ್ ಬಗ್ಗೆ ಭವಿಷ್ಯ ನುಡಿದಿದ್ದು, ಐಐಟಿ ಬಾಬ ಪ್ರಕಾರ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದೆ ಎಂದಿದ್ದಾರೆ.
ಫೈನಲ್ ಪಂದ್ಯದಲ್ಲಿ ರೋಚಕ ಹಣಾಹಣಿ ನಡೆಯಲಿದೆ. ಕೊನೆಗೆ ಆರ್‌ಸಿಬಿ ಟ್ರೋಫಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದ್ದಾರೆ. ಐಐಟಿ ಬಾಬ ಈ ಭವಿಷ್ಯ ನುಡಿಯುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳಲ್ಲಿ ಸಂಭ್ರಮಕ್ಕಿಂತ ಆತಂಕ ಹೆಚ್ಚಾಗಿದೆ. ಕಾರಣ ಚಾಂಪಿಯನ್ಸ್ ಟ್ರೋಫಿ ರೀತಿ ಪಾಕಿಸ್ತಾನ ಭಾರತ ವಿರುದ್ದ ಗೆಲ್ಲಲಿದೆ ಎಂದು ಒಂದು ಪಂದ್ಯವನ್ನೂ ಗೆಲ್ಲಲಿಲ್ಲ. ಇದೀಗ ಆರ್‌ಸಿಬಿ ಟ್ರೋಫಿ ಗೆಲ್ಲಲಿದೆ ಎಂದು ಅಭಿಮಾನಿಗಳ ಆತಂಕ ಹೆಚ್ಚಿಸಿದ್ದಾರೆ.