ಸಾಯುವ ನಿರ್ಧಾರ ಮಾಡಿದ್ರಂತೆ ಇಲಿಯಾನ..! ಯಾಕೆ ಗೊತ್ತೇ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಟಾರ್ ಸೆಲೆಬ್ರಿಟಿಗಳಿಗೆ ತಮ್ಮ ವೈಯಕ್ತಿಕ ಸಮಸ್ಯೆಗಳು, ಸಂಕಟಗಳು, ಆರೋಗ್ಯ ಸಮಸ್ಯೆಗಳು, ಕಷ್ಟಗಳು ಇರುತ್ತವೆ. ಅವುಗಳನ್ನು ಸಂದರ್ಶನಗಳ ಮೂಲಕ ಮನದಾಳದ ಮಾತುಗಳನ್ನು ಬಿಚ್ಚಿಡುತ್ತಾರೆ. ಈ ಸಾಲಿಗೆ ಒಂದು ಕಾಲದಲ್ಲಿ ಟಾಲಿವುಡ್‌ ಖ್ಯಾತ ನಟಿ ಇಲಿಯಾನಾ ಕೂಡಾ ಸೇರಿದ್ದಾರೆ. ತಾನೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ದೇವದಾಸ್ ಸಿನಿಮಾದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಇಲಿಯಾನಾ, ಪೋಕಿರಿ ಸಿನಿಮಾದ ಮೂಲಕ ಸ್ಟಾರ್ ಹೀರೋಯಿನ್ ಪಟ್ಟ ಪಡೆದರು. ಬಾಲಿವುಡ್ ಆಫರ್‌ ಬಂದ ಬಳಿಕ ತೆಲುಗಿನಲ್ಲಿ ಅವಕಾಶಗಳು ಕಡಿಮೆಯಾದವು. ಸದ್ಯ ಬಾಲಿವುಡ್‌ನಲ್ಲಿ ಸೆಟಲ್‌ ಆಗಿರೋ ಈ ಭಾಮ ನಾನು ಸಾಯುವ ಪ್ರಯತ್ನ ಮಾಡಿದ್ದೆ ಎಂದಿದ್ದಾರೆ.

ಇತ್ತಿಚೆಗಷ್ಟೇ ಬಾಲಿವುಡ್‌ನಲ್ಲಿ ನಡೆದ ಸಂದರ್ಶನವೊಂದರಲ್ಲಿ ನನ್ನ ಬಾಡಿ ಶೇಮಿಂಗ್‌ ಬಗ್ಗೆ ಮಾಡಿದ ಟ್ರೋಲ್‌ನಿಂದಾಗಿ ಆತ್ಮಹತ್ಯಾ ಮಾಡಿಕೊಳ್ಳಲು ಯೋಚಿಸಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದ್ರೆ ಅದೆಲ್ಲ ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ. “ನಾನು ಈ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದೆ, ನಿಜ. ಆದರೆ ಅದಕ್ಕೆ ಬಾಡಿ ಶೇಮಿಂಗ್ ಕಾರಣ ಅಲ್ಲ. ನನಗೆ 12 ವರ್ಷ ವಯಸ್ಸಿನಿಂದಲೂ ಆರೋಗ್ಯ ಸಮಸ್ಯೆಗಳಿದ್ದ ಕಾರಣ ಆತ್ಮಹತ್ಯೆಗೆ ಯೋಚಿಸಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!