ಹೊಸದಿಗಂತ ವರದಿ, ಮುಂಡಗೋಡ:
ಓಮಿನಿ ವಾಹನದಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಸಾಗಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಬಸವರಾಜ ಮಬನೂರ ಅವರ ತಂಡ ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನ ಹತ್ತಿರ ದಾಳಿ ನಡೆಸಿ 230 ಕೆಜಿ ಮಾಂಸ ಹಾಗೂ ಓಮಿನಿ ವಾಹನ ಸಮೇತ ಇಬ್ಬರನ್ನು ವಶಕ್ಕೆ ಪಡೆದುಕೊಂಡ ಘಟನೆ ಸೋಮವಾರ ಜರುಗಿದೆ.
ಹಾನಗಲ್‌ನ ತಾಲೂಕಿನ ಇರ್ಷಾದ ದರ್ಗಾ ಹಾಗೂ ಮುಂಡಗೋಡ ನೂರಾನಿಗಲ್ಲಿಯ ಮೌಲಾಲಿ ಜಂಡೆವಾಲೆ ಎಂಬವರೆ ಬಂಧಿತ ಆರೋಪಿಗಳಾಗಿದ್ದಾರೆ. ಬಂಕಾಪುರದಿಂದ ಮುಂಡಗೋಡ ಟಿಬೇಟಿಯನ್ ಕಾಲೋನಿಗೆ ಅಕ್ರಮವಾಗಿ ದನದ ಮಾಂಸವನ್ನು ಓಮಿನಿ ವಾಹನದಲ್ಲಿ ಸಾಗಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಬಸವರಾಜ ಮಬನೂರ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ 230 ಕೆಜಿ ದನದ ಮಾಂಸ ಇಬ್ಬರು ಆರೋಪಿಗಳ ಸಮೇತ ಓಮಿನಿ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೋಮಶೇಖರ ಮೇತ್ರಿ, ತಿರುಪತಿ ಚೌಡಣ್ಣನವರ, ಸಂಜು ರಾಠೋಡ, ನಾಗಪ್ಪ ಮುರಟಗಿ, ಪ್ರಕಾಶ ಶೃಂಗೇರಿ, ಚಾಲಕ ನಾಗರಾಜ ಬೇಗಾರ ಕಾರ್ಯಾಚರಣೆ ವಹಿಸಿದ್ದರು.