ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಪ್ರದಾಯ ಮತ್ತು ಪದ್ಧತಿಗಳ ನೆಪದಲ್ಲಿ ಕೋಳಿಗಳ ಕಾಳಗದ ಪಂದ್ಯ ನಡೆಸದಂತೆ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಬೇಕೆಂಬ ಹೈಕೋರ್ಟ್ ನಿರ್ದೇಶನಕ್ಕೆ ವಿರುದ್ಧವಾಗಿ, ಮೂರು ದಿನಗಳ ಉತ್ಸವ ನಡೆಸಿದ್ದು ಕೋಳಿಗಳ ರಕ್ತಪಾತವಾಗಿದೆ.
ಇದಕ್ಕೆ ದೇಶಾದ್ಯಂತ ಟೀಕೆ ವ್ಯಕ್ತವಾಗಿದೆ. ಈ ವರ್ಷ ಕೋಳಿ ಪಂದ್ಯ ವೇಳೆ ಅಂದಾಜು ಬೆಟ್ಟಿಂಗ್ ಮೌಲ್ಯ 2,000 ಕೋಟಿ ರೂಪಾಯಿ ಮೀರಿದೆ. ಆಂಧ್ರ ಪ್ರದೇಶದ ಕೃಷ್ಣ ಮತ್ತು ಎನ್‌ಟಿಆರ್ ಜಿಲ್ಲೆಗಳ ಎಡುಪುಗಲ್ಲು, ರಾಮವರಪ್ಪಡು, ಇಬ್ರಾಹಿಂಪಟ್ಟಣಂ, ಮಂಗಳಗಿರಿ, ಗನ್ನವರಂ, ನುನ್ನಾ, ತಿರುವುರು, ಚಿಂಚಿನಾಡ, ಪುಲಪಲ್ಲಿ ಮತ್ತು ಇತರ ಗ್ರಾಮಗಳಲ್ಲಿ ಕೋಳಿ ಕಾಳಗವನ್ನು ವೀಕ್ಷಿಸಲು ಯುವಕರು ಮತ್ತು ಮಹಿಳೆಯರು ಸೇರಿದಂತೆ ಹಲವಾರು ಜನರು ಕ್ರೀಡಾಂಗಣಗಳಲ್ಲಿ ನೆರೆದಿದ್ದರು.
ಸಂಕ್ರಾಂತಿ ಹಬ್ಬದ ಸಮಯದಲ್ಲಿ, ಆಂಧ್ರಪ್ರದೇಶದಲ್ಲಿ, ವಿಶೇಷವಾಗಿ ಗೋದಾವರಿ ಜಿಲ್ಲೆಗಳಲ್ಲಿ ಕೋಳಿ ಕಾಳಗವು ಒಂದು ಪ್ರಮುಖ ಪಂದ್ಯವಾಗಿದೆ. ಅಲ್ಲಿ ಸ್ಥಳೀಯರು ಈ ರಕ್ತಪಾತ ಹರಿಸುವ ಕ್ರೀಡೆಯನ್ನು ಪಾಲಿಸಬೇಕಾದ ಸಂಪ್ರದಾಯವೆಂದು ಪರಿಗಣಿಸುತ್ತಾರೆ.