Friday, December 8, 2023

Latest Posts

ಅಕ್ರಮ ಆನೆದಂತ ಸಂಗ್ರಹ ಪ್ರಕರಣ: ನಟ ಮೋಹನ್​ಲಾಲ್ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ತಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮ ಆನೆದಂತ ಹಾಗೂ ದಂತದಿಂದ ಮಾಡಿದ ವಸ್ತುಗಳನ್ನು ಸಂಗ್ರಹಿಸಿದ್ದ ಪ್ರಕರಣದಲ್ಲಿ ಮೋಹನ್​ಲಾಲ್​ಗೆ (Mohan Lal) ವಿರುದ್ಧ ಮುಂದಿನ ಆರು ತಿಂಗಳ ಕಾಲ ಯಾವುದೇ ಕ್ರಮ ಜರುಗಿಸದಂತೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.

ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇನ್ನಿಬ್ಬರು, ತಮ್ಮನ್ನು ಆರೋಪ ಮುಕ್ತರನ್ನಾಗಿ ಮಾಡುವಂತೆ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಮಾನ್ಯ ಮಾಡಿದೆ.

2011ರಲ್ಲಿ ಮೋಹನ್​ಲಾಲ್ ವಿರುದ್ಧ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ ಸಂದರ್ಭನಿವಾಸದಲ್ಲಿ ನಾಲ್ಕು ಆನೆದಂತ ಹಾಗೂ ಆನೆದಂತದಿಂದ ಮಾಡಲಾಗಿದ್ದ 13 ವಿವಿಧ ಕರಕುಶಲ ವಸ್ತುಗಳು ಬರಾಮತ್ತಾಗಿದ್ದವು. ಕೇರಳ ಅರಣ್ಯ ಹಾಗೂ ವನ್ಯಜೀವಿ ಇಲಾಖೆಯು ಮೋಹನ್​ಲಾಲ್ ವಿರುದ್ಧ ಅರಣ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.

ಇತ್ತೀಚೆಗೆ 2019ರಲ್ಲಿ ಎರ್ನಾಕುಲಂನ ಮೆಕ್ಕಪ್ಪಾಲ ಅರಣ್ಯ ಠಾಣೆಯು ಮೋಹನ್​ಲಾಲ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಆ ಕುರಿತು ಪೆರಂಬೂರಿನ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆದರೆ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಮೋಹನ್​ಲಾಲ್ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ಮೋಹನ್​ಲಾಲ್ ವಿರುದ್ಧ ಮುಂದಿನ ಆರು ತಿಂಗಳ ವರೆಗೆ ಯಾವುದೇ ಕ್ರಮ ಜರುಗಿಸದಂತೆ ನಿರ್ದೇಶನ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!