ಅಕ್ರಮಗಣಿಗಾರಿಕೆ ಹಗರಣ: ಜಾರ್ಖಂಡ್‌ ಸಿಎಂಗೆ ಅನರ್ಹತೆಯ ಕುತ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪ ಎದುರಿಸುತ್ತಿರುವ ಜಾರ್ಖಂಡ್‌ ಸಿಎಂ ಹೇಮಂತ್‌ ಸೂರೆನ್‌ ಅವರನ್ನು ವಿಧಾನ ಸಭೆಯಿಂದ ಅನರ್ಹಗೊಳಿಸುವಂತೆ ಭಾರತದ ಚುನಾವಣಾ ಆಯೋಗವು ಶಿಫಾರಸ್ಸು ಮಾಡಿದೆ ಎಂದು ಮೂಲಗಳು ವರದಿ ಮಾಡಿವೆ.

ತಮ್ಮ ಹೆಸರಿನಲ್ಲಿ ಸ್ಟೋನ್ ಚಿಪ್ಸ್ ಗಣಿಗಾರಿಕೆ ಗುತ್ತಿಗೆ ಪಡೆದು ಲಾಭದಾಯಕ ಕಚೇರಿಯನ್ನು(office of profit) ಹೊಂದಿರುವ ಆರೋಪದ ಮೇಲೆ ಸಿಎಂ ಅವರ ಅರ್ಹತೆಯನ್ನು ಪ್ರಶ್ನಿಸಿ ಪ್ರತಿಪಕ್ಷ ಬಿಜೆಪಿ ದೂರು ನೀಡಿತ್ತು. ಈ ಕುರಿತು ಜಾರ್ಖಂಡ್‌ ರಾಜ್ಯಪಾಲರು ಚುನಾವಣಾ ಆಯೋಗದ ಅಭಿಪ್ರಾಯ ಕೇಳಿದ್ದರು. ಚುನಾವಣಾ ಆಯೋಗವು ತನ್ನ ಅಭಿಪ್ರಾಯವನ್ನು ನೀಡಿದ್ದು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸುವಂತೆ ಶಿಫಾರಸು ಮಾಡಿ ಜಾರ್ಖಂಡ್ ಗವರ್ನರ್ ರಮೇಶ್ ಬೈಸ್ ಅವರಿಗೆ ಸೂಚಿಸಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಸೂರೆನ್‌ ಅವರು ಶಾಸಕರ ಮೂಲ ಅರ್ಹತೆಗಳನ್ನು ಉಲ್ಲಂಘಿಸಿ ಲಾಭದಾಯಕ ಕಚೇರಿ ಹೊಂದುವ ಮೂಲಕ ಚುನಾವಣಾ ನಿಯಮವನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ. ಅವರು 1951ರ ಜನಪ್ರತಿನಿಧಿ ಕಾಯ್ದೆಯ 9ಎ ನಿಯಮವನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.

ಸಂವಿಧಾನದ 192 ನೇ ವಿಧಿಯ ಪ್ರಕಾರ, ಒಂದು ರಾಜ್ಯದ ಶಾಸಕಾಂಗದ ಸದನದ ಸದಸ್ಯರು ಯಾವುದೇ ಅನರ್ಹತೆಗೆ ಒಳಪಟ್ಟಿದ್ದಾರೆಯೇ ಎಂಬ ಕುರಿತು ಯಾವುದೇ ಪ್ರಶ್ನೆ ಉದ್ಭವಿಸಿದರೆ, ಅಂತಿಮ ನಿರ್ಧಾರವನ್ನು ರಾಜ್ಯಪಾಲರು ತೆಗೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸೂರೆನ್‌ ಅವರ ಅನರ್ಹತೆ ಕುರಿತು ರಾಜ್ಯಪಾಲರ ತೀರ್ಮಾನವೇ ಅಂತಿಮವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!