ಹೊಸ ದಿಗಂತ ವರದಿ, ಮುಂಡಗೋಡ:
ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂ.3ರ ಬಳಿ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿರುವಾಗ ಪೊಲೀಸ್ರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಮತ್ತೊಬ್ಬ ಆರೋಪಿ ಪರಾರಿಯಾದ ಘಟನೆ ಜರುಗಿದೆ.
ಪಟ್ಟಣದ ಮುಲ್ಲಾಓಣಿಯ ಮಹಮ್ಮದಜಯಾನ್ ಬೇಪಾರಿ(21), ಹಾನಗಲ್ ತಾಲೂಕಿನ ಅಕ್ಕಿ ಆಲೂರ ಗ್ರಾಮದ ಅಬ್ದುಲ್ ಗಣಿ ಬೆಪಾರಿ ಎಂಬವರೇ ಬಂಧಿತ ಆರೋಪಿಗಳಾಗಿದ್ದು ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನ ಚಾಪೇಲ್ ದೊಂಡೋಪ್ ಎಂಬುವನು ಪರಾರಿಯಾಗಿದ್ದಾನೆ.
ಮೂರು ಜನ ಆರೋಪಿತರು ಟಿಬೆಟಿಯನ್ ಕ್ಯಾಂಪ್ ನಂಬರ 3ರಲ್ಲಿ ನಾಲ್ಕು ಸಾವಿರ ರೂ.ಮೌಲ್ಯದ 20 ಕೆಜಿ ದನದ ಮಾಂಸವನ್ನು ಮಾರಾಟ ಮಾಡುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ದನದಮಾಂಸ, ಒಂದು ಬೈಕ್, ತೂಕದ ತಕ್ಕಡಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಪಿಎಸೈ ಹನುಮಂತ ಕುಡಗುಂಟಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.