ಕಾರವಾರದಲ್ಲಿ ಇಂಡಿಯನ್‌ ಬುಲ್‌ ಜಾತಿಗೆ ಸೇರಿದ ಕಪ್ಪೆಗಳ ಅಕ್ರಮ ಸಾಗಾಟ: ಫ್ರಾಗ್‌ ರೆಸ್ಕ್ಯೂ!

ಹೊಸದಿಗಂತ ವರದಿ ಕಾರವಾರ:

ಖಾಸಗಿ ಪ್ರಯಾಣಿಕರ ವಾಹನದಲ್ಲಿ ಅಕ್ರಮವಾಗಿ ಸಾಗಟ ಮಾಡಲಾಗುತ್ತಿದ್ದ ಇಂಡಿಯನ್ ಬುಲ್ ಫ್ರಾಗ್ ಜಾತಿಗೆ ಸೇರಿದ ಕಪ್ಪೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕಾಳಿ ಸೇತುವೆ ಬಳಿ ದಾಳಿ ನಡೆಸಿದ ಅರಣ್ಯ ಅಧಿಕಾರಿಗಳ ತಂಡ 41 ಕಪ್ಪೆಗಳನ್ನು ರಕ್ಷಣೆ ಮಾಡಿದ್ದು ಕಪ್ಪೆ ಸಾಗಾಟ ಮಾಡುತ್ತಿದ್ದ ಗೋವಾ ಮೂಲದ ಖಾಸಗಿ ಬಸ್ಸನ್ನು ವಶಕ್ಕೆ ಪಡೆಯಲಾಗಿದೆ.
ಕಪ್ಪೆ ಸಾಗಾಟ ಮಾಡುತ್ತಿದ್ದ ಡಬ್ಬಕ್ಕೆ ಯಾರೂ ವಾರಸುದಾರರು ಇಲ್ಲದ ಕಾರಣ ವಾಹನ ಚಾಲಕ ಕಾಣಕೋಣ ನಿವಾಸಿ ಸಿದ್ಧೇಶ ಪ್ರಭುದೇಸಾಯಿ ಮತ್ತು ನಿರ್ವಾಹಕ ಜಾನ್ ಎನ್ನುವವರನ್ನು ಬಂಧಿಸಲಾಗಿದೆ.

ಗೋವಾದಲ್ಲಿ ಕಪ್ಪೆ ಮಾಂಸ, ಚರ್ಮಗಳನ್ನು ಬಳಸಿ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತಿದ್ದು ಅಪಾರ ಬೇಡಿಕೆ ಇದೆ ಎನ್ನಲಾಗುತ್ತಿದ್ದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಪ್ಪೆಗಳನ್ನು ಹಿಡಿದು ಸಾಗಿಸುವುದು ಜೋರಾಗಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!