ಹೊಸದಿಗಂತ ವರದಿ,ಮುಂಡಗೋಡ:
ತಾಲೂಕಿನ ಯರೇಬೈಲ್ ಅರಣ್ಯದಲ್ಲಿ ಅಕ್ರಮವಾಗಿ ಸಾಗುವಾನಿ ಮರ ಕಡಿದು ದಾಸ್ತಾನು ಮಾಡಿದ್ದ ಆರೋಪಿಯನ್ನು ಕಟ್ಟಿಗೆ ಸಮೇತ ವಶಕ್ಕೆ ಪಡೆದ ಘಟನೆ ಬುಧವಾರ ನಡೆದಿದೆ.
ತಾಲೂಕಿನ ಉಗ್ಗಿನಕೇರಿ ಗ್ರಾಮದ ವೀರಭದ್ರಯ್ಯ ಹಿರೇಮಠ (26) ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ. ಶಂಕ್ರಯ್ಯ ಹಿರೇಮಠ, ಮತ್ತು ವಸಂತ ಕೊರವರ ನಾಪತ್ತೆಯಾದ ಆರೋಪಿಗಳಾಗಿದ್ದಾರೆ. ಈವರು ಉಗ್ಗಿನಕೇರಿಯ ಬಾಳೆಹಳ್ಳಿ ಅರಣ್ಯದಲ್ಲಿ ಒಂದು ಬೃಹತ್ ಸಾಗುವಾನಿ ಮರ ಕಡಿದು ಏಳು ತುಂಡುಗಳನ್ನು ಮಾಡಿ ಅದರಲ್ಲಿ ನಾಲ್ಕು ಸಣ್ಣ ತುಂಡುಗಳನ್ನು ಮನೆಯಲ್ಲಿ ದಾಸ್ತಾನು ಮಾಡಿದ್ದ ಉಳಿದ ಮೂರು ತುಂಡುಗಳನ್ನು ಅರಣ್ಯದಲ್ಲಿ ದಾಸ್ತಾನು ಮಾಡಿದ್ದರು. ಸುಮಾರು 1.50 ಲಕ್ಷರೂ.ಮೌಲ್ಯದ ಕಟ್ಟಿಗೆಯನ್ನು ಮತ್ತು ಒಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಡಿಎಫ್ಒ ಹರ್ಷಾಭಾನು ಹಾಗೂ ಎಸಿಎಫ್ ರವಿ ಹುಲಕೋಟಿ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ವಾಗೀಶ ಜಿ ಎಸ್, ಉಪವಲಯ ಅರಣ್ಯಧಿಕಾರಿಗಳಾದ ಬಸವರಾಜ ಯದವಾಡ ಶಂಕರ ಬಾಗೇವಾಡಿ, ಅರುಣ ಕಾಶಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.