ಅಕ್ರಮ ಆಸ್ತಿ ಗಳಿಕೆ ಪ್ರಕರಣ: CBI ನಿಂದ ಡಿಕೆಶಿಗೆ ರಿಲೀಫ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧಿಸಿ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ಕ್ಕೆ ಕೋರ್ಟ್ (Karnataka High Court) ತಡೆಯಾಜ್ಞೆ ನೀಡಿದ್ದು, ಒಂದು ವಾರ ರಿಲೀಫ್ ಕೊಟ್ಟಿದೆ.

ಡಿಕೆಶಿ ವಿರುದ್ಧ ಸಿಬಿಐ (CBI) ನಡೆಸುತ್ತಿದ್ದ ತನಿಖೆಗೆ ಈ ಹಿಂದೆ ಕೋರ್ಟ್ ತಡೆ ನೀಡಿತ್ತು. ಅಲ್ಲದೇ ಫೆಬ್ರವರಿ 24ಕ್ಕೆ ಸಿಬಿಐಗೆ ತನಿಖಾ ಪ್ರಗತಿ ವರದಿ ನೀಡುವಂತೆ ಸೂಚಿಸಿತ್ತು. ಈ ಸಂಬಂಧ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಡಿಕೆಶಿಗೆ ಇನ್ನೂ ಒಂದು ವಾರ ಬಿಡುವು ನೀಡಿದೆ.

ಸಿಬಿಐ ಪರ ವಕೀಲರು ತನಿಖಾ ಪ್ರಗತಿ ವರದಿ ಸಲ್ಲಿಸಿದ ಬಳಿಕ ಮಾರ್ಚ್ 3ಕ್ಕೆ ವಿಚಾರಣೆ ಮುಂದೂಡಿತು. ಈ ವೇಳೆ ಮಧ್ಯಂತರ ತಡೆ ಆದೇಶದಲ್ಲಿ ಮಾರ್ಪಾಡು ಮಾಡುವಂತೆ ಸಿಬಿಐ ಮನವಿ ಮಾಡಿತು. ಅದಕ್ಕೆ ಅನುಮತಿ ಕೊಡದ ಹೈಕೋರ್ಟ್ (Karnataka High Court) ಮುಂದಿನ ವಿಚಾರಣೆ (ಮಾ.3) ತನಕ ಯಥಾಸ್ಥಿತಿಯಲ್ಲಿ ಮುಂದುವರಿಯುವಂತೆ ಸೂಚಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!