ಹೊಸದಿಗಂತ ವರದಿ, ವಿಜಯಪುರ:
ಅನೈತಿಕ ಸಂಬಂಧ ಹಿನ್ನಲೆ ವ್ಯಕ್ತಿಯೊಬ್ಬ ಬರ್ಬರ ಹತ್ಯೆಯಾಗಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಸುಂಗಠಾಣ ಗ್ರಾಮದ ಕಿನಾಲ್ ಬಳಿ ನಡೆದಿದೆ.
ಮೃತಪಟ್ಟವನನ್ನು ದಾದಾಪೀರ ನಾಯ್ಕೊಡಿ (35) ಎಂದು ಗುರುತಿಸಲಾಗಿದೆ.
ಬುದ್ದಪ್ಪ ಹೋಳಿ ಎಂಬವನು ದಾದಾಪೀರ ನಾಯ್ಕೊಡಿಗೆ ಹತ್ಯೆ ಮಾಡಿ, ಬಳಿಕ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲಿಸಿದರು.
ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.