ಹೊಸದಿಗಂತ ವರದಿ,ಬನವಾಸಿ:
ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗಾಂಜಾ ಸಮೇತ ಬಂಧಿಸಿರುವ ಘಟನೆ ಬನವಾಸಿ ಬಳಿಯ ಕಾಳಂಗಿಯಲ್ಲಿ ಸೋಮವಾರ ನಡೆದಿದೆ.
ಹಾವೇರಿಯ ಮಂಜುನಾಥ ಲಕ್ಷ್ಮಣ ಪೋಳ ಬಂಧಿತನಾಗಿದ್ದು, ಆತನಿಂದ 20 ಸಾವಿರ ರೂ. ಬೆಲೆಯ 330 ಗ್ರಾಂ. ಗಾಂಜಾ ಹಾಗೂ ಸಾಗಾಟಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.