ನಾನು ಇನ್ನೂ ಸತ್ತಿಲ್ಲ…ಕೆಲಸ ಮಾಡಲು ಬದ್ದ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇನ್ನೂ ನಾನು ಸತ್ತಿಲ್ಲ, ಬದುಕಿದ್ದೇನೆ …ಕೆಲಸ ಮಾಡಲು ಬದ್ದನಾಗಿದ್ದೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಮೋಷನಲ್ ಆಗಿ ಮಾತನಾಡಿದರು.

ಕಲ್ಬುರ್ಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಏನ್ ಮಾಡಿದ್ದೇನೆ ಅಂತಾ ನೀವು ಅರ್ಥ ಮಾಡಿಕೊಂಡಿದ್ದಿರಾ? ನಾನು ಕೆಲಸಗಾರ ಅಂತಿರಿ.. ಆದ್ರೆ ಮತಗಟ್ಟೆಗೆ ಹೋದಾಗ ಏನ್ ಅನಿಸುತ್ತೋ.. ಏನ್ ಆಗುತ್ತೋ ಗೊತ್ತಿಲ್ಲ.. ನಮ್ಮನ್ನು ಮರೆತು ಬಿಡ್ತಿರಿ. ಸಮಾಜದಲ್ಲಿ ಬದಲಾವಣೆ ತರೋದು ನನ್ನ ಗುರಿ. ನನ್ನ ಗುರಿ ನಿಜವಾಗಿಯೂ ಈ ಭಾಗವನ್ನು ಕಲ್ಯಾಣ ಕರ್ನಾಟಕ ಮಾಡೋದು ಎಂದು ಹೇಳಿದರು.

ನನ್ನ ಗುರಿ ಬಸವಣ್ಣನ ತತ್ವ ಉಳಿಯಬೇಕು ಅನ್ನೋದು‌. ನನ್ನ ಗುರಿ ಅಂಬೇಡ್ಕರ್ ಸಂವಿಧಾನ ಉಳಿಸೋದು. ದೇಶದ ಪ್ರಜಾಪ್ರಭುತ್ವ ಉಳಿಸೋ ಎಲೆಕ್ಷನ್ ಇದು. ಕೇವಲ ರಾಧಾಕೃಷ್ಣನ ಎಲೆಕ್ಷನ್ ಅಲ್ಲ. ಕೇವಲ ಕಾಂಗ್ರೆಸ್ ಎಲೆಕ್ಷನ್ ಅಲ್ಲ. ಈಗಾಗಲೆ ಮೋದಿ ಎಲ್ಲ ಮಷಿನರಿ ಬಳಸಿಕೊಂಡು ಪ್ರಜಾಪ್ರಭುತ್ವ ಹಾಳು ಮಾಡ್ತಿದ್ದಾರೆ. ನಮ್ಮ ಸರಕಾರ ಬಂದರೆ ಮನೆ ಯಜಮಾನಿಗೆ ಒಂದು ಲಕ್ಷ ಕೊಡುತ್ತೇವೆ. ಅಪ್ರೇಂಟಿಸ್ ಕೆಲಸ ಮಾಡುವ ಯುವಕರಿಗೆ ಒಂದೂ ಲಕ್ಷ ವೇತನ ಕೊಡುತ್ತೇವೆ. ಈ ರೀತಿ ಒಟ್ಟು 25 ಗ್ಯಾರಂಟಿಗಳಿವೆ ಅದನ್ನೆಲ್ಲವನ್ನು ನಾವು ಮಾಡಿ ತೊರಿಸುತ್ತೇವೆ ಎಂದರು.

ಮೋದಿ ಅವರು ಪದೆ ಪದೆ ಕಲಬುರಗಿಗೆ ಬಂದು ಹೋಗಿದ್ದಾರೆ‌. ಆದ್ರೆ ಬಂದು ಈ ಭಾಗಕ್ಕೆ ಏನು ಕೊಟ್ಟಿದ್ದಾರೆ ? ಹತ್ತು ವರ್ಷ ಆಡಳಿತ ಮಾಡಿದ್ರು ಏನ್ ಮಾಡಿದ್ದಾರೆ ? ಕಲಬುರಗಿಯಲ್ಲಿ ಏಮ್ಸ್ ಮಾಡಿ ಅಂತಾ ಕೇಳಿದ್ರು ಅದನ್ನು ಮಾಡಿಲ್ಲ. ಅವರಿಗೆ ನನ್ನ ಮೇಲೆ ಏನ್ ಸಿಟ್ಟಿದೆಯೋ ಗೊತ್ತಿಲ್ಲ ಅಥವಾ ಯಾರಾದ್ರು ಕಿವಿ ತುಂಬಿದ್ದಾರೋ ಗೊತ್ತಿಲ್ಲ‌. ಕಲ್ಯಾಣ ಕರ್ನಾಟಕಕ್ಕೆ ಅವರು ಏನೂ ಕೆಲಸ ಮಾಡಿಲ್ಲ‌. ನಾನು ಐದು ವರ್ಷ ಕೇಂದ್ರ ಮಂತ್ರಿ ಇದ್ದಾಗ ರಾಜ್ಯಕ್ಕೆ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ನಾನು ಮೋದಿ ಅವರಿಗೆ ಚಾಲೆಂಜ್ ಮಾಡ್ತೇನೆ. ನಾನು ಮಾಡಿದ ಅಭಿವೃದ್ದಿಯಲ್ಲಿ ಕೇವಲ ಹತ್ತು ಪರ್ಸೆಂಟ್ ನೀವು ಮಾಡಿದ್ರೆ ನಾನು ಕ್ಷಮೆ ಕೇಳುತ್ತೇನೆ‌ ಎಂದು ಪ್ರಧಾನಿ ಮೋದಿ ಅವರಿಗೆ ಸವಾಲ್ ಹಾಕಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!