ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸಮಂತಾ ಮಯೋಸಿಟಿಸ್ ಕಾಯಿಲೆಗೆ ತುತ್ತಾಗಿರುವ ಬಗ್ಗೆ ಈ ಹಿಂದೆ ತಾವೇ ಹೇಳಿಕೊಂಡಿದ್ದರು.
ಸಮಂತಾ ಇದೀಗ ಚೇತರಿಸಿಕೊಳ್ಳುತ್ತಿದ್ದು, ಯಶೋಧಾ ಸಿನಿಮಾ ಪ್ರಮೋಷನ್ಸ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಇದೀಗ ಮತ್ತೆ ಸಮಂತಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ.
ಇದಕ್ಕೆ ಸಮಂತಾ ಹಾಗೂ ಅವರ ಕುಟುಂಬದವರು ಇದೆಲ್ಲಾ ವದಂತಿ ಎಂದು ಹೇಳಿದ್ದಾರೆ. ಈ ಹಿಂದೆ ಕೂಡ ಇದೇ ರೀತಿ ಸಮಂತಾ ಅನಾರೋಗ್ಯದ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡಿತ್ತು. ಆಗ ನಟಿ ನಾನು ಜೀವನದ ಅಪಾಯಕಾರಿ ಹಂತದಲ್ಲಿದ್ದೇನೆ, ಮೂರು ತಿಂಗಳಿಮದ ಚಿಕಿತ್ಸೆ ಪಡೆದಿದ್ದೇನೆ. ನಾನು ಸಾಯುತ್ತಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು.