ನಾನು ರೊಕ್ಕ ಕೊಡಂಗಿಲ್ಲ ಅಂದ್ರೆ ಕೊಡಂಗಿಲ್ಲ: ಬಸ್‌ ಟಿಕೆಟ್‌ ಕೇಳಿದ ಕಂಡೆಕ್ಟರ್ ಜೊತೆ ಅಜ್ಜಿ ಕಿರಿಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಿಳೆಯರಿಗೆ ಬಸ್ ಗಳಲ್ಲಿ ಉಚಿತ ಎಂಬ ಕಾಂಗ್ರೆಸ್ ಗ್ಯಾರಂಟಿ ಜಾರಿಯಾಗುವ ಮುನ್ನವೇ ಎಲ್ಲಡೆ ಜನರೇ ಶುರುಮಾಡಿದ್ದು , ದೊಡ್ಡ ಸಮಸ್ಯೆ ಎದುರಾಗುತ್ತಿದೆ.

ಹೊಸಪೇಟೆಯಲ್ಲಿ ಇಂದು ಟಿಕೆಟ್‌ ತೆಗೆದುಕೊಳ್ಳಲು ಹೇಳಿದ್ದಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ ಮಹಿಳೆಯೊಬ್ಬರು ಹಿಗ್ಗಾಮುಗ್ಗಾ ಬೈದ ಪ್ರಸಂಗ ನಡೆದ ಬೆನ್ನಲ್ಲೇ ಅಂತಹುದೇ ಒಂದು ಘಟನೆ (Free Bus Rides)ರಾಯಚೂರು ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಬಸ್‌ ಟಿಕೆಟ್‌ಗೆ ನಾನು ರೊಕ್ಕ ಕೊಡಂಗಿಲ್ಲ ಅಂದ್ರೆ ಕೊಡಂಗಿಲ್ಲ ಎಂದು ಅಜ್ಜಿಯೊಬ್ಬರು ಪಟ್ಟುಹಿಡಿದಿದ್ದು, ಅವರನ್ನು ಮನವೊಲಿಸಲು ನಿರ್ವಾಹಕ ಹೈರಾಣಾಗಿದ್ದಾರೆ.

ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಕಾಂಗ್ರೆಸ್‌ ನಾಯಕರು ಭರವಸೆ ನೀಡಿದ್ದರು. ಹೀಗಾಗಿ ವಿವಿಧೆಡೆ ವಿದ್ಯುತ್‌ ಬಿಲ್‌ ಕಟ್ಟಲು, ಬಸ್‌ ಟಿಕೆಟ್‌ ಪಡೆಯಲು ಸಾರ್ವಜನಿಕರು ಸಾರ್ವಜನಿಕರು ನಿರಾಕರಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಅದೇ ರೀತಿ ಜಿಲ್ಲೆಯಲ್ಲಿ ಮಸ್ಕಿಯಿಂದ ಸಿಂಧನೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಅಜ್ಜಿ ಟಿಕೆಟ್‌ ಪಡೆಯೋದಿಲ್ಲ, ಸರ್ಕಾರದಿಂದ ಬಸ್‌ ಪ್ರಯಾಣ ಉಚಿತ ಎಂದು ನಮಗೆಲ್ಲ ಹೇಳಿರುವುದಾಗಿ ತಿಳಿಸಿದ್ದಾರೆ.

ನಮಗೆ ಮಸ್ಕಿ ಶಾಸಕ ಬಸನಗೌಡ ತುರುವಿಹಾಳ ಟಿಕೆಟ್ ಕೊಡಬ್ಯಾಡ ಎಂದಿದ್ದಾರೆ. ಹೀಗಾಗಿ ಟಿಕೆಟ್ ಕೊಡಲ್ಲ, ಬೇಕಾದರೆ ಬಸ್‌ನಿಂದ ಇಳಿಸು, ನಾನು ಗೆದ್ದ ಶಾಸಕರನ್ನು ಕೇಳುತ್ತೇನೆ ಎಂದು ವೃದ್ಧೆ ಹೇಳಿದ್ದಾರೆ.

ಬಸ್‌ನಲ್ಲಿ ಫ್ರೀ ಎಂದರು, ಈಗ ಮಾರ್ಗಮಧ್ಯೆ ಇಳಿಸಿದರೆ ನಾವು ಏನು ಅಡವಿ ಹೆಣ ಆಗಬೇಕಾ ಎಂದು ಅಜ್ಜಿ ಆಕ್ರೋಶ ಹೊರಹಾಕಿದ್ದಾರೆ.

ಕರೆಂಟ್ ಬಿಲ್ ಇಲ್ಲ, ಬಸ್‌ಗೆ ರೊಕ್ಕ ಇಲ್ಲ‌ ಎಂದು ಹೇಳಿದ್ದರು, ಅದಕ್ಕೆ ವೋಟು ಹಾಕಿದ್ದೀನಿ. ಹೀಗಾಗಿ ಟಿಕೆಟ್‌ ತೆಗೆದುಕೊಳ್ಳಲ್ಲ ಎಂದು ಪಟ್ಟುಹಿಡಿದಿದ್ದರಿಂದ ಅವರನ್ನು ಮನವೊಲಿಸಲು ನಿರ್ವಾಹಕ ಹೈರಾಣಾದರು. ಕೆಲ ಹೊತ್ತಿನ ಬಳಿಕ ಟಿಕೆಟ್ ಪಡೆದು ಅಜ್ಜಿ ಪ್ರಯಾಣ ಮಾಡಿದ್ದಾರೆ. ಸದ್ಯ ಅಜ್ಜಿ ಹಾಗೂ ನಿರ್ವಾಹಕನ ನಡುವಿನ ಸಂಭಾಷಣೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!