ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಮ್ಮ ಅಪಾರ್ಟ್ಮೆಂಟ್ನಿಂದ ಕರ್ಕಶ ಸದ್ದು ಕೇಳುತ್ತಿದೆ. ನಾನು ಪ್ರೆಗ್ನೆಂಟ್ ಸ್ವಲ್ಪ ಸೌಂಡ್ ಕಡಿಮೆ ಮಾಡ್ತೀರಾ ಎಂದು ಕೇಳಿದ ಮಹಿಳೆಗೆ ಪಾರ್ಟಿ ಮಾಡುತ್ತಿದ್ದಾತ ಗುಂಡು ಹಾರಿಸಿದ್ದಾರೆ.
ದೆಹಲಿಯ ಸಿರಸ್ಪುರ ಪ್ರದೇಶದಲ್ಲಿ ಮಧ್ಯರಾತ್ರಿ ಘಟನೆ ನಡೆದಿದ್ದು, ರಂಜು ಎಂಬ ಮಹಿಳೆ ಪಕ್ಕದ ಮನೆಗೆ ತೆರಳಿ ಸೌಂಡ್ ಕಡಿಮೆ ಮಾಡುವಂತೆ ಹೇಳಿದ್ದಾರೆ. ತಕ್ಷಣ ಹರೀಶ್ ಎಂಬಾತ ಸಿಟ್ಟಿಗೆದ್ದು ಆಕೆಯ ಗಂಟಲಿಗೆ ಶೂಟ್ ಮಾಡಿದ್ದಾನೆ.
ಬುಲೆಟ್ ತಗುಲಿದ ರಭಸಕ್ಕೆ ರಂಜು ಕೆಳಗೆ ಬಿದ್ದಿದ್ದಾರೆ. ಸ್ಥಳದಲ್ಲೇ ಆಕೆಗೆ ಗರ್ಭಪಾತವಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಕುತ್ತಿಗೆಗೆ ಬುಲೆಟ್ ತಗುಲಿರುವ ಕಾರಣ ಆಕೆ ಸ್ಟೇಟ್ಮೆಂಟ್ ಕೊಡುವ ಸ್ಥಿತಿಯಲ್ಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಗುಂಡು ಹೊಡೆದ ಹರೀಶ್, ಪಿಸ್ತೂಲ್ ಮಾಲೀಕ ಅಮಿತ್ನನ್ನು ಪೊಲೀಸರು ಬಂಧಿಸಿದ್ದಾರೆ.