October 15, 2026
Thursday, October 15, 2026
spot_img

ಎಲ್ಲೇ ಹೊರಗೆ ಹೋಗಬೇಕು ಅಂದ್ರು ಮೊದಲು ಈ ಕೆಲಸ ಮಾಡಿ: ಸಲಹೆ ಕೊಟ್ಟ ಐಎಮ್‌ಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಬಿಸಿಲು ಹೇಳತೀರದಷ್ಟಾಗಿದೆ. ಈ ಮಧ್ಯೆ ಯಾವ ಸ್ಥಳಕ್ಕೆ ಹೋಗೋದಕ್ಕೂ ಮನಸ್ಸಾಗದೇ ಜನ ಮನೆಯಲ್ಲಿಯೇ ಸೆಟಲ್‌ ಆಗುತ್ತಿದ್ದಾರೆ. ಹೊರಗೆ ಹೋಗೋ ಆಸೆ ಇದ್ದರೆ ಹೋಗುವ ಜಾಗದ ಹವಾಮಾನದ ಬಗ್ಗೆ ತಿಳಿದುಕೊಳ್ಳೋದನ್ನು ಮರೆಯಬೇಡಿ ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ.

ರಾಜ್ಯದಲ್ಲಿ ಈಗ ಮಿಕ್ಸ್‌ ವೆದರ್‌ನಂತಿದೆ. ಒಂದು ಜಿಲ್ಲೆಯಲ್ಲಿ ಬಿಸಿಲಿದ್ದರೆ, ಮತ್ತೊಂದು ಜಿಲ್ಲೆಯಲ್ಲಿ ಅತಿಯಾದ ಮಳೆಯಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಬೆಳಗ್ಗೆ ಬಿಸಿಲು ಇದ್ದರೆ ರಾತ್ರಿ ಮಳೆ ಇದೆ. ಹೀಗಾಗಿ ಅಗತ್ಯಕ್ಕೆ ತಕ್ಕಂತೆ ತಯಾರಾಗಲು ಅಲ್ಲಿನ ಹವಾಮಾನದ ಗುಣದ ಬಗ್ಗೆ ತಿಳಿದುಕೊಳ್ಳುವುದು ಉತ್ತಮವಾಗಿದೆ.

ಇದು ಕರ್ನಾಟಕದಲ್ಲಿ ಅಷ್ಟೇ ಅಲ್ಲ ಇಡೀ ಭಾರತದಲ್ಲಿಯೇ ಇರುವ ವೆದರ್‌ ಸಿಸ್ಟಮ್‌ ಆಗಿದೆ. ಯಾವ ರಾಜ್ಯಕ್ಕೆ ಹೋದರೂ ಅದರದ್ದೇ ಆದ ವಾತಾವರಣವಿದ್ದು, ಆರೋಗ್ಯ ಹಾಳಾಗದಂತೆ ಅಲ್ಲಿಗೆ ತಕ್ಕಂತೆ ತಯಾರಾಗಿ ಹೋಗುವುದು ಉತ್ತಮವಾಗಿದೆ.

Must Read