ರಾಜ್ಯಾದ್ಯಂತ ಇ-ಚಲನ್ ದಂಡ ವ್ಯವಸ್ಥೆ ಜಾರಿ, ಏನಿದು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಾದ್ಯಂತ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗ್ತಲೇ ಇದ್ದು, ಇದೀಗ ಪೆನ್ನು ಪೇಪರ್ ಹಿಡಿದು ಪೊಲೀಸರು ದಂಡ ವಿಧಿಸೋದಿಲ್ಲ.

ಹೈಟೆಕ್ ದಂಡ ಪಾವತಿ ಬಗ್ಗೆ ಕರ್ನಾಟಕ ಟ್ರಾಫಿಕ್ ಪೊಲೀಸ್ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದ ಎಲ್ಲೆಡೆ ಇನ್ಮುಂದೆ ಇ-ಚಲನ್ ಮೂಲಕ ದಂಡ ವ್ಯವಸ್ಥೆಗೆ ಚಾಲನೆ ಸಿಕ್ಕಿದೆ.

ಏನಿದು ಇ-ಚಲನ್?
ರಾಜ್ಯದಲ್ಲಿ ಶೇ.100 ರಷ್ಟು ಪೇಪರ್‌ಲೆಸ್ ದಂಡ ಪಾವತಿ ವ್ಯವಸ್ಥೆ ಜಾರಿಯಾಗಿದೆ. ದೇಶದಲ್ಲಿ ಇದೇ ಮೊದಲ ರಾಜ್ಯವಾಗಿದ್ದು, ಸಂಚಾರ ನಿರ್ವಹಣೆಯಲ್ಲಿ ಪಾರದರ್ಶಕತೆ ಇರಲಿದೆ.

ರಾಜ್ಯ ಪೊಲೀಸ್ ಇಲಾಖೆ ಎಸ್‌ಬಿಐ ಜತೆ ಸಹಯೋಗ ಮಾಡಿಕೊಂಡಿದ್ದು, ಸಾರ್ವಜನಿಕರು ಕಟ್ಟು ದಂಡ ನೇರವಾಗಿ ಬ್ಯಾಂಕ್‌ಗೆ ಬಂದು ಬೀಳುತ್ತದೆ. ಇದರಿಂದಾಗಿ ಮಧ್ಯದಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ಪ್ರತೀ ರೂಪಾಯಿಗೂ ಲೆಕ್ಕ ಇರುತ್ತದೆ. ಜನರು ಕಟ್ಟಿದ ದಂಡ ನೇರ ಇಲಾಖೆಯ ಬ್ಯಾಂಕ್ ಅಕೌಂಟ್‌ಗೆ ಬಂದು ಬೀಳಲಿದೆ. ದಂಡ ವಿಧಿಸಲ್ಪಟ್ಟವರು ಯುಪಿಐ, ಡೆಬಿಟ್ ಕಾರ್ಡ್ ಅಥವಾ ಕ್ಯಾಶ್ ಮೂಲಕ ದಂಡ ಕಟ್ಟಬಹುದಾಗಿದೆ.

ಒಟ್ಟಾರೆ 722 ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳು, 64ಸಂಚಾರ ಠಾಣೆಗಳ ಸಿಬ್ಬಂದಿಗೆ 1,766 ಇ-ಚಲನ್ ಯಂತ್ರ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!