ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಈಗಾಗಲೇ ಕೊನೆಗೊಂಡಿದೆ. ಬಹಳ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಶೋ ಜನರ ನೆಚ್ಚಿನ ಕಾರ್ಯಕ್ರಮ ಎಂದರೆ ತಪ್ಪಿಲ್ಲ. ಬಿಗ್ ಬಾಸ್ ಮುಗಿದ್ಮೇಲೆ ಇನ್ನೇನಪ್ಪಾ ನೋಡೋದು ಅನ್ಕೋತಿದ್ದ ಜನರಿಗೆ, ಬಿಗ್ ಬಾಸ್ ಓಟಿಟಿ ಶೋ ಶುರುವಾಗಲಿದೆ ಎಂಬ ಸುದ್ದಿ ಇದೀಗ ಬಿಗ್ ಬಾಸ್ ತಂಡ ತಿಳಿಸಿದೆ.
ಬಿಗ್ ಬಾಸ್ 10ರ ಫೈನಲಿಸ್ಟ್ ಆಗಿದ್ದ ಒಬ್ಬ ಸ್ಪರ್ಧಿ ಇದೀಗ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರಂತೆ ಅಷ್ಟಕ್ಕೂ ಯಾರು ಆ ಸ್ಪರ್ಧಿ? ಹೌದು, ಬಿಗ್ ಬಾಸ್ ಫೈನಲಿಸ್ಟ್ ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಇದೀಗ ಸಿನಿಮಾ ನಿರ್ಮಾಣ ಮಾಡುವ ಕನಸು ವ್ಯಕ್ತ ಪಡಿಸಿದ್ದಾರೆ.
ಇಷ್ಟುಕ್ಕೂ ಯಾವ ಚಿತ್ರಕ್ಕೆ , ಯಾವ ನಟನ ಜೊತೆ ಕೆಲಸ ಮಾಡೋಕೆ ಆಸೆ ಎಂಬುದನ್ನು ಕೂಡ ಅವರು ತಿಳಿಸಿದ್ದಾರೆ. ಸಂತೋಷ್ ಅವರಿಗೆ ನಟ ಸುದೀಪ್ ಹಾಗೂ ಧ್ರುವ ಸರ್ಜಾ ಜೊತೆ ಕೆಲಸ ಮಾಡಲು ಆಸೆ ಇದೆಯಂತೆ. ತಮಗೆ ಅವಕಾಶ ಸಿಕ್ಕರೆ ನಾನು ಇವರಿಬ್ಬರ ಜೊತೆ ಕೂಡ ಸಿನಿಮಾ ಮೂಲಕ ನಟನೆ ಮಾಡೋಕೆ ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಸದ್ಯ ನನಗೆ 2 ವರ್ಷ ಸಮಯಾವಕಾಶ ಬೇಕು, ನಂತರ ನಾನು ಸಿನಿಮಾ ನಿರ್ಮಾಣ ಮಾಡುತ್ತೇನೆಂದು ಸಂತೋಷ್ ಸ್ಪಷ್ಟ ಪಡಿಸಿದ್ದಾರೆ.